ಕಡಬ ಟೈಮ್ಸ್, ಸವಣೂರು : ಗ್ರಾ.ಪಂ.ವತಿಯಿಂದ ಗುರುತಿಸಲಾದ ಮರಳು ದಿಬ್ಬಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬುಧವಾರ ಪರಿಶೀಲನೆ ನಡೆಸಿದ್ದಾರೆ.
ಪಾಲ್ತಾಡಿ ಗ್ರಾಮದ ನಾಡೋಳಿ ಗೌರಿಹೊಳೆ ,ಬಂಬಿಲದಲ್ಲಿ, ಕುಮಾರಮಂಗಲದಲ್ಲಿ 2 ಕಡೆ, ಸರ್ವೆ ಸಮೀಪದ ಪೆರಿಯಡ್ಕದಲ್ಲಿ ಸವಣೂರು ಗ್ರಾ.ಪಂ.ನಿಂದ ಗುರುತಿಸಲಾದ ಸ್ಥಳದಲ್ಲಿ ಗಣಿ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭ ಗಣಿ ಇಲಾಖೆಯ ಭೂ ವಿಜ್ಞಾನಿ ವಸುಧಾ, ಸಹಾಯಕ ಅಭಿಯಂತರ ಮಹದೇವಪ್ಪ , ಸರ್ವೆಯರ್ ಗಿರಿ ಗೌಡ,ಪಾಲ್ತಾಡಿ ಗ್ರಾಮಕರಣಿಕ ರವಿಚಂದ್ರ ,ಗ್ರಾಮ ಸಹಾಯಕ ಬಾಬು ,ಸವಣೂರು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ನಾರಾಯಣ ಬಿ,ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಅಂಗಡಿಮೂಲೆ, ಸಿಬಂದಿ ಪ್ರಮೋದ್ ಕುಮಾರ್ ,ಪ್ರವೀಣ್ ಚೆನ್ನಾವರ,ದೀಕ್ಷಿತ್ ಜೈನ್ ಚೆನ್ನಾವರ ಹಾಜರಿದ್ದರು