ಕಡಬ ಟೈಮ್ಸ್,ಸವಣೂರು: ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನೊಪ್ಪಿದ ಕುರಿತು ಸವಣೂರು ಗ್ರಾಮದಿಂದ ತಡವಾಗಿ ವರದಿಯಾಗಿದೆ.
ಅತ್ತಿಕೆರೆ ನಿವಾಸಿ ಸಾರಮ್ಮ ಎಂಬವರು ಆ.1 4ರಂದು ತಮ್ಮ ವಾಸದ ಮನೆಯಲ್ಲಿ ಕೃಷಿಗೆ ತಂದಿರಿಸಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ಬಳಿಕ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ ಅವರು ಆ.30 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.