Home ಪ್ರಮುಖ ಸುದ್ದಿ ಸವಣೂರು:ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಸವಣೂರು:ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

ಕಡಬ ಟೈಮ್ಸ್ (KADABA TIMES):ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸವಣೂರು ವಲಯ   ಸಮಿತಿ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದ ರೈತ ವಿರೋಧಿ ಕೃಷಿ ಮಸೂದೆಯ ವಿರುದ್ಧ ಸವಣೂರು ಜಂಕ್ಷನ್ ನಲ್ಲಿ ಶುಕ್ರವಾರ  ಪ್ರತಿಭಟನೆ ನಡೆಯಿತು.

UNIC-KADABA

ಪ್ರತಿಭಟನಾಕಾರರನ್ನು ಉದ್ದೇಶಿಸಿ ಸವಣೂರು ಗ್ರಾ.ಪಂ ಮಾಜಿ ಸದಸ್ಯ ರಫೀಕ್ ಎಂ .ಎ ರವರು ಮಾತನಾಡಿ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯವರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಮಸೂದೆಗೆ ಸಮ್ಮತಿ ಸೂಚಿಸಿ ರೈತಾಪಿ ವರ್ಗಗಳಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದರು.

GURUJI ADD

ವಲಯ ಅಧ್ಯಕ್ಷರಾದ ಸಿದ್ದೀಕ್ ಅಲೆಕ್ಕಾಡಿಯವರ ನೇತೃತ್ವದಲ್ಲಿ ಈ ಪ್ರತಿಭಟನಾ ಸಭೆ ನಡೆದಿದ್ದು ಪಿಎಫ್ ಐ ಏರಿಯಾ ಅಧ್ಯಕ್ಷ ಇರ್ಷಾದ್ ಸರ್ವೆ, ಕಾರ್ಯದರ್ಶಿ ರಫೀಕ್ ಪಿ, ಸವಣೂರು ಗ್ರಾ.ಪಂ ಮಾಜಿ ಸದಸ್ಯ ರಝಾಕ್  ಕೆನರಾ, ಹಂಝ ಅಕ್ಕರೆ, ಮಹಮ್ಮದ್ ಎಂ ಕೆ, ಅಝೀಝ್ ಎಸ್ ಎಂ ಯುವ ಉದ್ಯಮಿ ಮಸ್ಕತ್ ಸಹಿತ ಹಲವು  ಕಾರ್ಯಕರ್ತರು ಭಾಗವಹಿಸಿದ್ದರು ವಲಯ ಕಾರ್ಯದರ್ಶಿ ರಫೀಕ್ ಎಂ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು

LEAVE A REPLY

Please enter your comment!
Please enter your name here