ಕಡಬ ಟೈಮ್ಸ್, ರಾಜಕೀಯ ಸುದ್ದಿ: ಸುಳ್ಯ ಕ್ಷೇತ್ರದ ಶಾಸಕ ಅಂಗಾರರು ಅಭಿವೃದ್ಧಿ ಯಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಹೇಳಿದಂತೆ ಹಿಟ್ ಆ್ಯಂಡ್ ರನ್ ಮಾಡುವುದೂ ಇಲ್ಲ. ಶಾಸಕರ ವಿಧಾನ ಸಭಾ ವ್ಯಾಪ್ತಿಯಲ್ಲಿ ಕೆಲಸಗಳು ನಡೆಯುತ್ತಿದ್ದು, ಇದನ್ನು ತಿಳಿದುಕೊಳ್ಳದ ಕಾಂಗ್ರೆಸ್ ನಿರಂತರ ಅಪಪ್ರಚಾರದಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮಂಡಲ ಸಮಿತಿ ತಿಳಿಸಿದೆ.
ಶನಿವಾರಾ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು “ಶಾಸಕ ಅಂಗಾರರು ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಮಾಡುತ್ತಿದ್ದು, ತಾಲೂಕಿನ ವಿವಿಧ ಕಡೆಗಳಲ್ಲಿ 125 ಕ್ಕೂ ಹೆಚ್ಚು ಸೇತುವೆ ನಿರ್ಮಾಣ. ರಸ್ತೆಗಳ ಅಭಿವೃದ್ಧಿ ಎಲ್ಲವೂ ನಮಗೆ ಕಾಣುವಂತದ್ದು. ಎರಡು ಬಸ್ ನಿಲ್ದಾಣ, ಬಸ್ ಡಿಪೋ, ಪಿಡಬ್ಲ್ಯೂಡಿ ಸಬ್ ಸ್ಟೇಶನ್, ಅಗ್ನಿ ಶಾಮಕ ಠಾಣೆ ಹೀಗೆ ಹಲವು ಅಭಿವೃದ್ಧಿಯಾಗಿವೆ. ಇನ್ನೂ ಕೆಲವು ಕಾಮಗಾರಿ ಪ್ರಗತಿಯಲ್ಲಿದೆ.
ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಗೆ ನೀಡಲಾದ ಪ್ರಾಜೆಕ್ಟ್ ಸರಕಾರದಲ್ಲಿ ಇದೆ.ಅದು ಮುಂದಿನ ದಿನದಲ್ಲಿ ಬರುತ್ತದೆ. ಅಂಬೇಡ್ಕರ್ ಭವನದ ಕೆಲಸ ಪ್ರಗತಿಯಲ್ಲಿದೆ.ಸುಳ್ಯದ ತಾಲೂಕು ಕ್ರೀಡಾಂಗಣಕ್ಕೂ ಹಿಂದಿನ ಸರಕಾರ ಅನುದಾನ ಸರಿಯಾಗಿ ನೀಡದೆ ಪೆಂಡಿಗ್ ಅಯ್ತು ಎಂದು ಅವರು ವಿವರ ನೀಡಿದರು.
ಕಾಂಗ್ರೆಸ್ ಮಾನಸಿಕತೆಯನ್ನು ನಾವು ಹೇಳಬೇಕಿಲ್ಲ. ಅವರೇ ಹೇಳುತ್ತಿದ್ದಾರೆ ಎಂದು
ಹೇಳಿದ ಅವರು ಕಾಂಗ್ರೆಸ್ ಈಗ ಆರ್ ಎಸ್ ಎಸ್ ತಂತ್ರದ ದಾರಿ ನೆಚ್ಚಿಕೊಂಡಿದೆ ಎಂದು ಕಂಜಿಪಿಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪದಾಧಿಕಾರಿಗಳು ಇದ್ದರು.