ಕಡಬ ಟೈಮ್ಸ್, ನೂಜಿಬಾಳ್ತಿಲ: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ,ಜಿಲ್ಲಾ ಘಟಕ ರಾಯಚೂರು ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಹಸಿರು ಕವಿಗೋಷ್ಠಿ ಸ್ಪರ್ಧೆಯಲ್ಲಿ ನೂಜಿಬಾಳ್ತಿಲದ ಸಮ್ಯಕ್ತ್. ಹೆಚ್. ಜೈನ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಮಕ್ಕಳ ಸಾಹಿತ್ಯ ಸಂಭ್ರಮ ಸರಣಿಯ ಅಂಗವಾಗಿ, ಪರಿಸರ ಮಹತ್ವವನ್ನು ಬಿತ್ತರಿಸುವ ಸಲುವಾಗಿ ಈ ಕವಿಗೋಷ್ಠಿ ಸ್ಪರ್ಧೆ ಆಯೋಜನೆಗೊಂಡಿತ್ತು.
ಸಾಹಿತ್ಯ ಕ್ಷೇತ್ರದದಲ್ಲಿ ಮಿಂಚುವ ಮೂಲಕ ಕಡಬದ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಯುವ ಬರಹಗಾರನಾಗಿ ಗುರುತಿಸಿಕೊಂಡಿರುವ ಸಮ್ಯಕ್ತ್ ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಮತ್ತು ಶ್ರೀಮತಿ ಮಂಜುಳಾರವರ ಪುತ್ರ.