ಕಡಬ ಟೈಮ್ಸ್ (KADABA TIMES):ದ್ವಿಚಕ್ರದಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸಹಿತ ಒಟ್ಟು ನಾಲ್ವರು ಆರೋಪಿಗಳನ್ನು ವಿಟ್ಲ ಎಸ್ಐ ವಿನೋದ್ ಕುಮಾರ್ ರೆಡ್ಡಿ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಡಬ ತಾಲೂಕಿನ ಸವಣೂರು ಗ್ರಾಮದ ಚಾಪಳ್ಳ ನಿವಾಸಿ ಮಹಮ್ಮದ್ ಶಾಕಿರ್ ಅಲಿಯಾಸ್ ಶಾಕಿ(23ವ.), ಶಾಂತಿನಗರ ನಿವಾಸಿ ಹಸನ್ ಕುಟ್ಟಿಯವರ ಪುತ್ರ, ಪ್ರಸ್ತುತ ಒಳಮೊಗರು ಗ್ರಾಮದ ಕುಂಬ್ರ ಶೇಕಮಲೆಯಲ್ಲಿ ವಾಸವಾಗಿರುವ ಕೆ. ಮಹಮ್ಮದ್ ಅಲಿಯಾಸ್ ಮಮ್ಮು(41 ವ.), ಸವಣೂರು ಗ್ರಾಮದ ಶಾಂತಿನಗರ ಕ್ವಾರ್ಟ್ರಸ್ ನಲ್ಲಿ ವಾಸವಿರುವ ಮುನೀರ್ ರವರ ಪುತ್ರ ಮಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (24 ವ.) ಹಾಗೂ ಅರಿಯಡ್ಕ ಗ್ರಾಮದ ತಿಂಗಳಾಡಿ ಹೆಂಡೆಸಾಗು ನಿವಾಸಿ ಅಬ್ದುಲ್ ಕರೀಂ ರವರ ಪತ್ನಿ ಹಾಜಿರ(44ವ.) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 20,650 ನಗದು, ಕುಂಬ್ರದ ಬ್ಯಾಂಕ್ ನಲ್ಲಿ ಅಡವಿಟ್ಟ ಕಳವುಗೈದ ಚಿನ್ನ, ಆಕ್ಟೀವ್ ಹೋಂಡಾ ವಾಹನವನ್ನು ವಶಪಡಿಸಲಾಗಿದೆ.