Home ಪ್ರಮುಖ ಸುದ್ದಿ ಬಲವಂತದ ಬಂದ್‌ಗೆ ಮುಂದಾದರೆ ಕಾನೂನು ಕ್ರಮ-ಎಸ್ಪಿ ಎಚ್ಚರಿಕೆ

ಬಲವಂತದ ಬಂದ್‌ಗೆ ಮುಂದಾದರೆ ಕಾನೂನು ಕ್ರಮ-ಎಸ್ಪಿ ಎಚ್ಚರಿಕೆ

ಕಡಬ ಟೈಮ್ಸ್ (KADABA TIMES):ಕೇಂದ್ರ ಮತ್ತು ರಾಜ್ಯ ಸರ್ಕಾರ ಭೂ-ಸುಧಾರಣೆ, ಎಪಿಎಂಸಿ, ವಿದ್ಯುತ್ ಖಾಸಗೀಕರಣ ಮಸೂದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಜಂಟಿಯಾಗಿ ಸೆ. ೨೮ರಂದು ನಡೆಸುವ ಹೋರಾಟದ ಸಂದರ್ಭದಲ್ಲಿ ಬಲವಂತದ ಬಂದ್‌ಗೆ ಒತ್ತಾಯಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

UNIC-KADABA

ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಲ್ ಇಂಡಿಯ ಕಿಸಾನ್ ಸಭಾ, ರೈತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಜನಶಕ್ತಿ ಹಾಗೂ ಇನ್ನಿತರೇ ರೈತ ಸಂಘಟನೆಗಳು ಜಂಟಿಯಾಗಿ ಆಯಾ ಸ್ಥಳೀಯ ಮುಖಂಡರುಗಳು ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ತಿಳಿದಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಜಿಲ್ಲೆಯಲ್ಲಿ ಎ.ಎಸ್.ಪಿ./ಡಿವೈಎಸ್ಪಿ-೩, ಸಿಪಿಐ/ಪಿಐ -೮, ಪಿಎಸ್‌ಐ-೨೫, ಎಎಸ್‌ಐ-೪೫, ಹೆಚ್‌ಸಿ/ಪಿಸಿ- ೩೨೦ ಹಾಗೂ ೫೦ ಮಂದಿ ಗೃಹರಕ್ಷಕ ದಳದ ಸಿಬ್ಬಂದಿಯವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಇದರೊಂದಿಗೆ ೩ ಕೆ.ಎಸ್.ಆರ್.ಪಿ. ತುಕಡಿ ಹಾಗೂ ೩ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಬಿ.ಸಿ.ರೋಡು, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಸುಳ್ಯ ಬೆಳ್ತಂಗಡಿ ಕಡೆಗಳಲ್ಲಿ ನಿಯೋಜಿಸಲಾಗಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾದಂತೆ ಸಂಯಮದಿಂದ ವರ್ತಿಸುವಂತೆ ಹಾಗೂ ಬಲವಂತವಾಗಿ ಯಾರಾದರೂ ಬಂದ್ ಮಡಲು ಪ್ರಯತ್ನಿಸಿದ್ದಲ್ಲಿ ಅಥವಾ ಒತ್ತಾಯಿಸಿದ್ದಲ್ಲಿ ಜಿಲ್ಲಾ ನಿಯಂತ್ರಣ ಕೊಠಡಿ ದೂರವಾಣಿ ೦೮೨೪-೨೨೨೦೫೦೮ಗೆ ಕರೆ ಮಾಡಿ ತಿಳಿಸುವಂತೆ ಅವರು ತಿಳಿಸಿದ್ದಾರೆ.

GURUJI ADD

ಇದೇ ವೇಳೆಯಲ್ಲಿ ಕೋವಿಡ್-೧೯ ತಡೆಗಾಗಿ ಇರುವ ನಿಯಾಮಾವಳಿಗಳನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here