Home ಪ್ರಮುಖ ಸುದ್ದಿ ಪೊಲೀಸ್ ಇನ್ಸ್‌ಪೆಕ್ಟರ್ ನ ನಕಲಿ Facebook ಖಾತೆ ಬಳಸಿ ಕಡಬ ವ್ಯಕ್ತಿಗೆ ಹಣದ ಬೇಡಿಕೆ ಇಟ್ಟ...

ಪೊಲೀಸ್ ಇನ್ಸ್‌ಪೆಕ್ಟರ್ ನ ನಕಲಿ Facebook ಖಾತೆ ಬಳಸಿ ಕಡಬ ವ್ಯಕ್ತಿಗೆ ಹಣದ ಬೇಡಿಕೆ ಇಟ್ಟ ಆನ್ ಲೈನ್ ವಂಚಕ!

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಇತ್ತೀಚೇಗೆ ಆನ್ ಲೈನ್ ಮೂಲಕ ವಂಚಕರು ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ.ಇದೀಗ ಪೊಲೀಸ್ ಅಧಿಕಾರಿಯೋರ್ವರ ಹೆಸರಿನಲ್ಲಿ‌ ನಕಲಿ ಫೇಸ್‌ಬುಕ್‌ ಖಾತೆ ಬಳಸಿ ಕಡಬದ ವ್ಯಕ್ತಿಗೆ ಸಂದೇಶ ರವಾನಿಸಿ ಹಣ ನೀಡುವಂತೆ ಮನವಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

UNIC-KADABA

ಕಡಬ ಮೂಲದ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸುರೇಶ್ ಕುಮಾರ್ ಅವರ ಹೆಸರಿನ ನಕಲಿ ಫೇಸ್ಬುಕ್ ಖಾತೆ ಬಳಸಿ ಕಡಬದ ಅಶೋಕ್ ಎಂಬವರಿಗೆ ಮೆಸೆಂಜರ್ ಮೂಲಕ 30 ಸಾವಿರ ತುರ್ತು ಹಣದ ಅಗತ್ಯವಿದ್ದು, ತಕ್ಷಣವೇ ಕಳುಹಿಸಿಕೊಡುವಂತೆ ಸಂದೇಶ ಬಂದಿದೆ.

GURUJI ADD

ಅನುಮಾನಗೊಂಡ ಅಶೋಕ್ ಅವರು ನೇರವಾಗಿ ಸುರೇಶ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸತ್ಯಾಂಶ ಬಯಲಾಗಿದೆ. ಆನ್ ಲೈನ್ ವಂಚಕರಿಂದ ಮೋಸ ಹೋಗದಂತೆ ಎಚ್ಚರದಿಂದಿರಲು ಪೊಲೀಸರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here