Home ಪ್ರಮುಖ ಸುದ್ದಿ ಧರ್ಮಸ್ಥಳ: ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ,ಇಬ್ಬರು ಆರೋಪಿಗಳ ಸೆರೆ

ಧರ್ಮಸ್ಥಳ: ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ ,ಇಬ್ಬರು ಆರೋಪಿಗಳ ಸೆರೆ

ಕಡಬ ಟೈಮ್ಸ್, ಬೆಳ್ತಂಗಡಿ: ತಾಲೂಕಿನ ಕಳೆಂಜ ಗ್ರಾಮದ ಬಳ್ಕಾಜೆ ಎಂಬಲ್ಲಿ ತೋಟದ ಕೆಲಸಕ್ಕೆಂದು ಬರುತ್ತಿದ್ದ ದಲಿತ ಮಹಿಳೆ ಮೃತ ಪಟ್ಟ ನಂತರ ಮಹಿಳೆಯ ಅಪ್ರಾಪ್ತ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

UNIC-KADABA

ಮೃತ ಮಹಿಳೆಯ ಪುತ್ರಿ ಅಪ್ರಾಪ್ತ ವಯಸ್ಸಿನವಳಾಗಿದ್ದು ಪರಿಶಿಷ್ಟ ಪಂಗಡ ಜಾತಿಗೆ ಸೇರಿದವರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಬಳ್ಕಾಜೆ ರೆಜಿಮೊನು ಎಂಬವರ ತೋಟದಲ್ಲಿ ಬಾಲಕಿ ಮತ್ತು  ಅವರ ತಾಯಿ ಕೆಲಸ ಮಾಡುತ್ತಿದ್ದರು. ಕೆಲವೊಮ್ಮೆ ಅಲ್ಲಿ ಎರಡು ಮೂರು ದಿನಗಳ ಕಾಲ ಇರುತ್ತಿದ್ದರು.

ಮೇ ತಿಂಗಳಲ್ಲಿ ರೆಜಿಮೊನುರವರ ತೋಟಕ್ಕೆ ತಾಯಿಯೊಂದಿಗೆ ಹೋಗಿದ್ದ ಸಮಯ ರೆಜಿಮೊನು ಎಂಬವರು ತೊಂದರೆ ಮಾಡುತ್ತಿದ್ದು, ಕುಡಿದು ಬಂದು ಕೈಯಿಂದ ಹೊಡೆಯುತ್ತಿದ್ದು ಅಲ್ಲದೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದರು. ರೆಜಿಮೊನು ಹಾಗೂ ಆತನ  ಮನೆಯಲ್ಲಿ ಕೆಲಸಕ್ಕಿದ್ದ ಕೃಷ್ಣ ಎಂಬಾತನು ಅಪ್ರಾಪ್ತೆ ಬಾಲಕಿ ಯನ್ನು ಕೊಲೆ ಮಾಡುವುದಾಗಿ  ಬೆದರಿಕೆ ಹಾಕುತ್ತಿದ್ದನು ಎಂಬುದಾಗಿ ಅಪ್ರಾಪ್ತ ಬಾಲಕಿ ದೂರಿನಲ್ಲಿ ಆರೋಸಿದ್ದಾರೆ .

GURUJI ADD

ಈ ಬಗ್ಗೆ  ಧರ್ಮಸ್ಥಳ ಪೊಲೀಸ್ ಠಾಣಾ ಅ.ಕ್ರ 61/2020 ಕಲಂ:354,323,504,506 ಜೊತೆಗೆ 34 ಐಪಿಸಿ ಮತ್ತು ಕಲಂ 8 ಪೊಕ್ಸೊ ಕಾಯ್ದೆ 2012 ಮತ್ತು ಕಲಂ 3(1)(w)(i), 3(2)(v)(a) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 2015 ರಂತೆ ದೂರು ದಾಖಲಾಗಿರುತ್ತದೆ. ರಜಿಮೊನು ಹಾಗೂ ಕೃಷ್ಣ ಎಂಬವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

LEAVE A REPLY

Please enter your comment!
Please enter your name here