ಕಡಬ ಟೈಮ್ಸ್, ನೆಲ್ಯಾಡಿ:ಶಿಕ್ಷಕ ದಿನಾಚರಣೆ ಹಿನ್ನೆಲೆಯಲ್ಲಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಅವರ ನಿವಾಸದಲ್ಲಿ ಜೇಸಿಐ ನೆಲ್ಯಾಡಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಶಿಕ್ಷಕ ವಿ.ಆರ್. ಹೆಗಡೆ, ನೆಲ್ಯಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ ಉಪಸ್ಥಿತರಿದ್ದರು.
ಜೇಸಿಐ ನೆಲ್ಯಾಡಿ ಘಟಕಾಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಕೆಡೆಂಜಿ ಗುತ್ತು ಪ್ರವೀಣ್ ಕುಮಾರ್, ನೆಲ್ಯಾಡಿ ಜೆಸಿಐ ಕಾರ್ಯದರ್ಶಿ ಗಿರೀಶ್, ಸಿವಿಲ್ ಇಂಜಿನಿಯರ್ ಬಾಲಕೃಷ್ಣ ಪಿ.ಹೆಚ್ .ಪುಂಡಿಕಾಯಿ ಬಾಲಚಂದ್ರ ಶಗ್ರಿತ್ತಾಯ, ಸರಸ್ವತೀ ಗೋಪಾಲಕೃಷ್ಣ ಶಗ್ರಿತ್ತಾಯ ಹಾಜರಿದ್ದರು.