ಕಡಬ ಟೈಮ್ಸ್, ಕೋಡಿಂಬಾಳ: ವಿಶ್ವ ಹಿಂದು ಪರಿಷತ್ ಬಜರಂಗದಳ ಕಡಬ ಪ್ರಖಂಡ ಇದರ ವತಿಯಿಂದ ‘ಪ್ರಕೃತಿ ವಂದನ’ ಕಾರ್ಯಕ್ರಮದಡಿ ಗಿಡ ನೆಡುವ ಕಾರ್ಯಕ್ರಮ ಭಾನುವಾರದಂದು ಕಲ್ಲಂತಡ್ಕ ಹಿಂದು ರುದ್ರ ಭೂಮಿಯಲ್ಲಿ ನಡೆಯಿತು.
ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ತೆಂಗಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ನ ಗೌರವಾಧ್ಯಕ್ಷ ಜನಾರ್ದನ ರಾವ್ ಕಡಬ , ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಉಪಾಧ್ಯಕ್ಷ ಸುರೇಶ್ ಕೋಟೆ ಗುಡ್ಡೆ , ಸಂತೋಷ್ ಸುವರ್ಣ ಕೋಡಿಬೈಲು, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಹಾಜರಿದ್ದರು.
ವಿ ಹಿಂ ಪ ಪ್ರಮುಖರಾದ ವಾಸುದೇವ ಗೌಡ ಕೊಲ್ಲೆಸಾಗು, ಜಯರಾಮ ಪಡೆಜ್ಜಾರು , ರವಿ ಪಾದರೆ , ವಿ .ಹಿಂ.ಪ ಗೋ ರಕ್ಷಕ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ,ಶಿಕ್ಷಕ ಮಾಧವ ಕೋಲ್ಪೆ , ಮಹೇಶ್ ರೈ ಕುಂಟೋಡಿ, ರಾಮಚಂದ್ರ ಕೋಲ್ಪೆ ,ಬಜರಂಗದಳ ಸಹ ಸಂಚಾಲಕರಾದ ಯತೀಶ್ ಹೊಸಮನೆ, ಪುನೀತ್ ಕೇಪು , ಸಾಪ್ತಾಹಿಕ ಮಿಲನ್ ತಿಲಕ್ ರೈ ನಂದುಗುರಿ, ಪ್ರಸಾದ್ ಬಲ್ಯ , ಆಚ್ಚುತ ಗೌಡ ದೇರಾಜೆ , ಪ್ರವೀಣ್ ಕಾರ್ಕಳ ,ಸುಂದರ ಕಲ್ಲತಂಡ್ಕ , ಪ್ರೇಮಚಂದ್ರ ಅಜ್ಜಾರಮೂಲೆ, ರಕ್ಷಿತ್ ಗೌಡ ದೋಳ, ಮಹೇಶ್ ನಂದುಗುರಿ ಉಪಸ್ಥಿತರಿದ್ದರು.