ಕಡಬ ಟೈಮ್ಸ್,ಸುಬ್ರಹ್ಮಣ್ಯ :ಕೋರೋನಾ ಲಾಕ್ ಡೌನ್ ಹಿನ್ನಲೆ ಯಲ್ಲಿ ಸ್ಥಗಿತಗೊಂಡಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದಿನಿಂದ ಪೂಜಾ ಸೇವೆಗಳು ಆರಂಭಗೊಳ್ಳಲಿದೆ.
ಕಳೆದೊಂದು ತಿಂಗಳಿನಿಂದ ದೇವರ ದರ್ಶನ ಆರಂಭವಾಗಿದ್ದರೂ,ಸೇವೆಗಳು ಆರಂಭವಾಗಿರಲಿಲ್ಲ. ಇದೀಗ ಅಧಿಕಾರಿಗಳನ್ನು ಜಿಲ್ಲಾಡಳಿತ ತ್ವರಿತವಾಗಿ ನೇಮಕಗೊಳಿಸಿ ಪೂಜಾ ಸೇವೆಗಳು ಸಮರ್ಪಕವಾಗಿ ನಡೆಯಲು ಸೂಚನೆ ನೀಡಿದೆ.ದಿನಕ್ಕೆ 30 ಸರ್ಪಸಂಸ್ಕಾರ ಸೇವೆ, 30 ನಾಗ ಪ್ರತಿಷ್ಠೆ, ಬೆಳಗ್ಗಿನ ಪಾಳಿಯ ಎರಡು ಪಾಳಿಯ ಆಶ್ಲೇಷ ಪೂಜೆ ತಲಾ 30 ರಂತೆ, ಮಹಾಪೂಜೆ ಮತ್ತು ಪಂಚಾಮೃತಾಭಿಷೇಕ ತಲಾ 10 ರಂತೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಸೇವೆಗೆ ಇಬ್ಬರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸೇವಾರ್ಥಿಗಳಿಗೆ ಮಾತ್ರ ಅನ್ನ ಪ್ರಸಾದ ವ್ಯವಸ್ಥೆ ಇರಲಿದೆ. ಮೂರು ಸಾವಿರಕ್ಕೂ ಮೇಲ್ಪಟ್ಟು ಸರ್ಪ ಸಂಸ್ಕಾರ ಸೇವೆಗೆ ಬುಕ್ಕಿಂಗ್ ಆಗಿದ್ದು, ಇನ್ನು ಹೊಸದಾಗಿ ಸೇವೆಗೆ ಅವಕಾಶವಿರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ.