ಕಡಬ ಟೈಮ್ಸ್, ಕಲ್ಲುಗುಡ್ಡೆ : ನೂಜಿಬಾಳ್ತಿಲ ಗ್ರಾಮದ ಪೂಜಾರಿ ಮನೆ ನಿವಾಸಿ ಶೀನಪ್ಪಗೌಡ (66 ವ) ಎಂಬವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತನ್ನ ಮಗ ಅಸೌಖ್ಯದಲ್ಲಿರುವ ಕಾರಣ ನೊಂದು ಕೊಂಡಿದ್ದರು. ಅಲ್ಲದೆ ಕುಡಿತದ ಚಟವನ್ನೂ ಹೊಂದಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಕೊಟ್ಟಿಗೆಯ ಪಕ್ಕಾಸಿಗೆ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರ ಪುತ್ರ ಸುರೇಶ್ ರವರು ಕಡಬ ಠಾಣೆಗೆ ನೀಡಿದ ದೂರಿನಂತೆ ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರು ಪುತ್ರ ಸುರೇಶ್, ಪುತ್ರಿ ಲೀಲಾವತಿರಮೇಶ್ ರವರನ್ನು ಅಗಲಿದ್ದಾರೆ.