ಕಡಬ ಟೈಮ್ಸ್ (KADABA TIMES):ತಾಲೂಕು ಕಚೇರಿಯ ಸಿಬ್ಬಂದಿಯ ಎಡವಟ್ಟಿನಿಂದ ಇನ್ನೊಬ್ಬರ ಖಾತೆಗೆ ಜಮೆಯಾಗುತ್ತಿದ್ದ ವಿ ಬ್ಬರ ಕಳೆದ ಹತ್ತು ತಿಂಗಳ ಅಂಗವಿಕಲ ವೇತನ ಶನಿವಾರ ಫಲಾನುಭವಿಯ ಖಾತೆಗೆ ಜಮೆಯಾಗಿದೆ.
ಮಾಧ್ಯಮಗಳು ವರದಿ ಮಾಡಿದ ಬಳಿಕ ಎಚ್ಚೆತ್ತ ತಹಶೀಲ್ದಾರ್ ಅವರು ಬ್ಯಾಂಕಿಗೆ ಪತ್ರ ಬರೆದು ಜಮೆಯಾದ ಹಣ ವಾಪಸ್ಸು ನೀಡುವ ಸಂಬಂದ ಕ್ರಮಕೈಗೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ್ದರು. ಅಂತೆಯೇ ಫಲಾನುಭವಿ ಚಾರ್ವಾಕ ಗ್ರಾಮದ ಬೊಮ್ಮಳಿಕೆ ಲಕ್ಷ್ಮಣ ಗೌಡ ಅವರ ಖಾತೆಗೆ ವೇತನ ಹಣ ವಾಪಸ್ಸಾಗಿದೆ
ಕಡಬ ತಹಶೀಲ್ದಾರ ಜಾನ್ ಪ್ರಕಾಶ್ ರೋಡ್ರಿಗಸ್ ಅವರು ಬ್ಯಾಂಕಿಗೆ ನೀಡಿದ ಪತ್ರದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಮ್ಮುಖದಲ್ಲಿ ಹಣ ಜಮೆಯಾಗುತ್ತಿದ್ದ ಕುಸುಮಾಧರ ಗೌಡರು ಚೆಕ್ ಮುಖಾಂತರ ಫಲಾನುಭವಿಯ ಖಾತೆಗೆ 6000 ರೂಪಾಯಿಯನ್ನು ಜಮೆ ಮಾಡಿದ್ದಾರೆ.
ಲಕ್ಷ್ಮಣ ಗೌಡರಿಗೆ ಜಮೆಯಾಗಬೇಕಾದ ಪ್ರತಿ ತಿಂಗಳ ರೂಪಾಯಿ 600 ವೇತನ ಬೇರೊಬ್ಬರ ಖಾತೆಗೆ ಜಮೆಯಾಗಿತ್ತು. ಈ ಖಾತೆದಾರರ ವಿಳಾಸವನ್ನು ಬ್ಯಾಂಕಿನಿಂದ ಪಡೆದು ಲಕ್ಷ್ಮಣ ಗೌಡರು ಖಾತೆದಾರ ಕುಸುಮಾಧರ ಗೌಡರನ್ನು ಸಂಪರ್ಕಿಸಿದ್ದರು. ಅಲ್ಲದೆ ಅವರ ಸಂಪರ್ಕ ಸಂಖ್ಯೆಯನ್ನು ಕಡಬ ತಾಲೂಕು ಕಛೇರಿಗೂ ನೀಡಿದ್ದರು. ಆದರೂ ಕಛೇರಿಯಿಂದ ಯಾವೂದೇ ಸ್ಪಂದನೆ ದೊರೆಯಲಿಲ್ಲ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.