ಕಡಬ ಟೈಮ್ಸ್, ಪಟ್ಟಣ ಸುದ್ದಿ:ಕಳೆದ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಸಾಧಕ ವಿದ್ಯಾರ್ಥಿ ಋತ್ವಿಕ್ ಮತ್ತು ಹೆತ್ತವರನ್ನು ಕಡಬದ ಪಿಲ್ಯ ಫ್ಯಾಷನ್ ಮಳಿಗೆಯಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ವಿದ್ಯಾರ್ಥಿಯ ಜೊತೆಗೆ ಪೋಷಕರಾದ ನಾರಾಯಣ ಗೌಡ, ಸುಂದರಿ ಅವರನ್ನೂ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಶಾಲು ಹೊದಿಸಿ ಫಲಪುಷ್ಪ , ಸ್ಮರಣಿಕೆ, ಉಡುಗೊರೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಖಾದರ್ ಸಾಹೇಬ್ ಕಲ್ಲುಗುಡ್ಡೆ .ವಿಜಯ ಸ್ವೀಟ್ಸ್ ಮಾಲಕ ಮಹಾಬಲ ನಾಯ್ಕ್ ಮೇಲಿನಮನೆ, ಅಶ್ವಿನಿ ಫ್ಯಾನ್ಸಿ ಫೂಟ್ ವೇರ್ ಮಾಲಕ ಶ್ರೀಧರ್ ಮಣಿಯಾನಿ, ಝೂಬಿ ಗೋಲ್ಡ್ ಮಾಲಕರಾದ ಯೂನುಸ್ ಕೋಡಿಕಂಡ, ಮುನೀರ್ ಹಳೆಸ್ಟೇಷನ್ ಅನುದೀಪ್ ಎನ್.ಬಿ, ಮುಬೀನ್, ಮೊಹಮ್ಮದ್ ಮೌಸೀನ್, ಸಿಬ್ಬಂದಿಗಳಾದ ಸುಮಾ ದಡ್ಡು, ವಸಂತಿ ಕೆರ್ಮಾಯಿ, ಪುಷ್ಪಾ, ಉಪ್ಪಿನಂಗಡಿ ಇಂದ್ರ ಪ್ರಸ್ಥ ವಿದ್ಯಾರ್ಥಿಗಳಾದ ಮೊಹಮ್ಮದ್ ಶಿಹಾಬ್, ಜಿಬಿನ್ ಮೀನಾಡಿ ಉಪಸ್ಥಿತರಿದ್ದರು.
ಪಿಲ್ಯ ಫ್ಯಾಷನ್ ಮಾಲಕ ರಶೀದ್ ಪಿಲ್ಯ ಸ್ವಾಗತಿಸಿ ,ಫಾರೂಕ್ ಪಿಲ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.