ಕಡಬ ಟೈಮ್ಸ್ (KADABA TIMES):ಸಾಮಾಜಿಕ ಜಾಗೃತಿ ಕಾರ್ಯಕ್ರಮ ಮತ್ತು ಆಂದೋಲನದ ಮೂಲಕ ಪ್ರಚಲಿತದಲ್ಲಿರುವ ನೀತಿ ತಂಡದ 2020-21ನೇ ಸಾಲಿನ ಕಡಬ ತಾಲೂಕು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಸೋಮವಾರ ಕಡಬದ ಅನುಗ್ರಹ ಅಸೋಸಿಯೇಟ್ಸ್ ಕಚೇಯಲ್ಲಿ ನಡೆಯಿತು.
ನೀತಿ ತಂಡದ ರಾಜ್ಯ ಕಾರ್ಯದರ್ಶಿ ಜೈಸನ್ ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ನೀತಿ ತಂಡದ ಅಧ್ಯಕ್ಷರಾಗಿ ಜೋಸ್ ತೋಮಸ್, ಕಡಬ ತಾಲೂಕು ನೀತಿ ತಂಡದ ಅಧ್ಯಕ್ಷರಾಗಿ ರಂಜಿತ್ ಕಡಬ,ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್ ಇಚ್ಲಂಪ್ಪಾಡಿ, ಕಾರ್ಯದರ್ಶಿಯಾಗಿ ಸುದೀಶ್ ಗೋಳಿಯಡ್ಕ,ಜೊತೆ ಕಾರ್ಯದರ್ಶಿಯಾಗಿ ಜಿಬಿನ್ ಕಡಬ ,ಕೋಶಾಧಿಕಾರಿಯಾಗಿ ಅಬ್ರಹಾಂ ಎಂ.ಜೆ ನೆಲ್ಯಾಡಿ ನೇಮಕಗೊಂಡರು.
ಐದು ಜನರು ಸದಸ್ಯರ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಅಕ್ಟೋಬರ್ 2 ರಂದು ನೀತಿ ತಂಡದ ಕಡಬ ತಾಲೂಕು ಕಚೇರಿಯು ಉದ್ಘಾಟನೆಗೊಳ್ಳಲಿದೆ