ಕಡಬ ಟೈಮ್ಸ್ (KADABA TIMES):ಉಪ್ಪಿನಂಗಡಿ ಪೇಟೆ ಪರಿಸರದಲ್ಲಿ ಹುಚ್ಚು ನಾಯಿಯೊಂದು ತಿರುಗಾಡಲಾರಂಭಿಸಿದ್ದು, ಆಗಾಗ್ಗೆ ಕಾಣಿಸಿಕೊಳ್ಳುವ ನಾಯಿ ಪೊಲೀಸ್ ಸಿಬ್ಬಂದಿ ಸಹಿತ ಹಲವಾರು ಮಂದಿಗೆ ಕಚ್ಚಿದ್ದು, ಸಾರ್ವಜನಿಕರು ಭೀತಿ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಉಪ್ಪಿನಂಗಡಿ ಪೇಟೆಯಲ್ಲಿ ಕಾಣಿಸಿಕೊಂಡಿರುವ ಈ ಹುಚ್ಚು ನಾಯಿ ಪೇಟೆಯಲ್ಲಿನ ಬೀದಿ ನಾಯಿಗಳಿಗೆಲ್ಲಾ ಕಚ್ಚಿದ್ದು, ಉಪ್ಪಿನಂಗಡಿ ನಾಡ ಕಚೇರಿ ಬಳಿಯ ಮನೆಯೊಂದರ ಹೊರಗೆ ಕೆಲಸ ಮಾಡಿಕೊಂಡಿದ್ದ ಕೂಲಿ ಕಾರ್ಮಿಕರೊಬ್ಬರಿಗೆ ಕಚ್ಚಿದ ನಾಯಿ ಬಳಿಕ ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಾಣಿಸಿಕೊಂಡು ಪೊಲೀಸ್ ಸಿಬ್ಬಂದಿಯ ಮೇಲೆರಗಿ ಕಚ್ಚಿದೆ.
ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಅಧಿಕ ಬೀದಿ ನಾಯಿಗಳು ಇದ್ದು, ಅಲ್ಲಲ್ಲಿ ಗುಂಪಾಗಿ ಎಲ್ಲೆಂದರಲ್ಲಿ ಜಗಳವಾಡುತ್ತಾ ಓಡಾಟ ಮಾಡಿಕೊಂಡಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ಮಕ್ಕಳು, ಮಹಿಳೆಯರು ಬೀದಿ ನಾಯಿಯ ಓಡಾಟದಿಂದಾಗಿ ಆತಂಕಿತರಾಗಿದ್ದಾರೆ.