Home ಪ್ರಮುಖ ಸುದ್ದಿ ಈಶ್ವರಮಂಗಲದಲ್ಲಿ ಮಹಿಳೆ ಬಾವಿಗೆ ಬಿದ್ದು ಸಾವು

ಈಶ್ವರಮಂಗಲದಲ್ಲಿ ಮಹಿಳೆ ಬಾವಿಗೆ ಬಿದ್ದು ಸಾವು

2
0

ಕಡಬ ಟೈಮ್ಸ್ (KADABA TIMES):ಪಡುವನ್ನೂರು ಗ್ರಾಮದ ಈಶ್ವರಮಂಗಲ ಸಾರಕೂಟೇಲು ಎಂಬಲ್ಲಿ ಮಹಿಳೆಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ  ಬೆಳಿಗ್ಗೆ ಬೆಳಕಿಗೆ ಬಂದಿದೆ.

UNIC-KADABA

ಮೂಲತಃ ಕಬಕ ನಿವಾಸಿಯಾಗಿದ್ದು ಪಡವನ್ನೂರು ಗ್ರಾಮದ ಸಾರಕೂಟೇಲಿನಲ್ಲಿ ವಾಸ್ತವ್ಯ ಹೊಂದಿರುವ ಗೋಪಾಲಕೃಷ್ಣ ಭಟ್ ಅವರ ಪತ್ನಿ ಲಲಿತಾ ಸಿ(65ವ) ಎಂಬವರು ಮೃತಪಟ್ಟವರು.ಮಂಗಳವಾರ  ರಾತ್ರಿ ಲಲಿತಾ ಅವರು ಊಟ ಮಾಡಿ ಮಲಗಿದ್ದರು. ಬೆಳಗ್ಗೆ ಗೋಪಾಲಕೃಷ್ಣ ಭಟ್ ಅವರು ಎದ್ದು ನೋಡುವಾಗ ಲಲಿತಾ ಅವರು ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮನೆಯ ಪಕ್ಕದಲ್ಲಿರುವ ಬಾವಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದೆ.

GURUJI ADD

ಮೃತರು ಗಂಡ ಗೋಪಾಲಕೃಷ್ಣ ಭಟ್ , ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರ ಠಾಣೆಯ ಪೊಲೀಸರು ತೆರಳಿದ್ದಾರೆ.

LEAVE A REPLY

Please enter your comment!
Please enter your name here