ಕಡಬ ಟೈಮ್ಸ್, ಆಲಂಕಾರು: ಅಂಗಡಿ ಕೊಠಡಿಯ ಬಾಡಿಗೆ ಕೇಳಿದ ಕಟ್ಟಡ ಮಾಲಿಕನಿಗೆ ಜಾತಿ ನಿಂದನೆ ಮಾಡಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲಂಕಾರು ಪೇಟೆಯಲ್ಲಿ ಸುಂದರ ಬೈರ ಎಂಬವರಿಗೆ ಸೇರಿದ್ದ ಕಟ್ಟಡದಲ್ಲಿ ಕೋಣೆಯನ್ನು ಪುನೀತ್ ರಾಕ್ ಶೆಟ್ಟಿ ಎಂಬವರಿಗೆ ಕೋಳಿ ಮಾಂಸ ಮಾರಾಟ ಸಲುವಾಗಿ ಬಾಡಿಗೆಗೆ ನೀಡಿದ್ದರು. ಅದರಂತೆ ಬಾಡಿಗೆಯ ಕರಾರು ಪತ್ರವು ಜೂನ್ 31ಕ್ಕೆ ಕೊನೆಗೊಂಡಿತ್ತು. ಆದರೆ ಪುನಿತ್ ರಾಜ್ ಶೆಟ್ಟಿಯವರು ಕರಾರು ಪತ್ರ ಅವಧಿ ಕೊನೆಗೊಂಡರೂ ಬಾಡಿಗೆ ಕಟ್ದಡಕ್ಕೆ ಯಾವುದೇ ಬಾಡಿಗೆಯನ್ನು ನೀಡದೇ ಸುಂದರ ಅವರ ವಿರುದ್ದವೇ ಸುಳ್ಳು ನೀಡಿ ಸುಂದರ ಅವರ ಕಟ್ಟಡದಲ್ಲಿರುವ ಮತ್ತೊಂದು ಕೋಣೆಯನ್ನು ಪುನಿತ್ ರಾಜ್ ಶೆಟ್ಟಿಯವರು ಬಲತ್ಕಾರದಿಂದ ಸ್ವಾದೀನಪಡಿಸಿ ಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಳಿಕ ಕಟ್ಟಡ ಮಾಲಕ ಸುಂದರ ಅವರು ಸ್ವಾಧೀನಪಡಿಸಿಕೊಂಡ ಕೋಣೆಯನ್ನು ತನ್ನ ಸ್ವಾದೀನಕ್ಕೆ ಪಡೆದುಕೊಂಡು ಕಟ್ಟಡದ ಕೋಣೆಗೆ ಸಿಮೆಂಟ್ ಶೀಟ್ ಗಳಿಂದ ಬಂದ್ ಮಾಡಿದ್ದಾರೆ, ಆದರೆ ಸೆ.2ರಂದು ಪುನೀತ್ ರಾಜ್ ಶೆಟ್ಟಿಯವರು ಸುಂದರ ಅವರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಕೋಣೆಗೆ ಅಳವಡಿಸಿದ ಸಿಮೇಂಟ್ ಶೀಟ್ ಗಳನ್ನು ಧ್ವಂಸ ಮಾಡಲು ಪ್ರಯತ್ನಿಸಿ ಸುಂದರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆಂದು ಕಲಂ 448,506, ಕಲಂ3(1)ಎಫ್,ಪಿ, ಎಸ್.ಸಿ, ಎಸ್,ಟಿ ಕಾಯ್ದೆಯನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.