ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕಡಬ ತಾಲೂಕಿನ ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೋಮವಾರ ಬೆಳಗ್ಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ ನೀಡಿದ್ದರು.
ದೇವರ ದರ್ಶನ ಪಡೆದು ಬಳಿಕ ತೆರಳಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಬರಮಾಡಿಕೊಂಡರು.
ಈ ವೇಳೆ ಉದಯಕುಮಾರ್, ಬಿಜೆಪಿಯ ಪ್ರಶಾಂತ್ ಮಾಣಿಲ, ದಿನೇಶ್ ಸಂಪ್ಯಾಡಿ, ಅಚ್ಚುತ ಗೌಡ, ಚಿದಾನಂದ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು