ಕಡಬ ಟೈಮ್ಸ್, ಸುಬ್ರಹ್ಮಣ್ಯ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅನುಷ್ ಎ.ಎಲ್ ಅವರನ್ನು ಮೆಸ್ಕಾಂ ಸುಬ್ರಹ್ಮಣ್ಯ ಉಪವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಅನುಷ್ ತಂದೆ ಗುತ್ತಿಗಾರು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಲೋಕೇಶ್ ಎಣ್ಣೆಮಜಲು,ತಾಯಿ ಉಷಾ ಲೋಕೇಶ್, ಸುಬ್ರಹ್ಮಣ್ಯ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಚಿದಾನಂದ.ಕೆ, ಸುಬ್ರಹ್ಮಣ್ಯ ಮೆಸ್ಕಾಂ ಉಪವಿಭಾಗದ ಸಹಾಯಕ ಇಂಜಿನಿಯರ್ ನಿತಿನ್, ಪಂಜ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಹರಿಕ್ರಷ್ಣ ಹಾಗೂ ಸುಬ್ರಹ್ಮಣ್ಯ , ಗುತ್ತಿಗಾರು ಮತ್ತು ಪಂಜ ಮೆಸ್ಕಾಂ ಶಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.