ಕಡಬ ಟೈಮ್ಸ್, ಪಂಜ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಅನುಷ್ ಎಣ್ಣೆಮಜಲು ಮತ್ತು ಅತ್ಯುತ್ತಮ ಶ್ರೇಣಿ ಅಂಕಗಳೊಂದಿಗೆ ಉತ್ತೀರ್ಣರಾದ ಕು|ಆಶಿತಾ ಬಿಟ್ಟಂಗಿಲರವರನ್ನು ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಭಾನುವಾರ ಸನ್ಮಾನಿಸಲಾಯಿತು.
ಕ್ಲಬ್ ನ ಅಧ್ಯಕ್ಷ ವಿಜಯ್ ಕುಮಾರ್ ಕಾಂಜಿ ಅವರ ನೇತೃತ್ವದಲ್ಲಿ ಹಿರಿಯರಾದ ಧರ್ಮಪಾಲ ಗೌಡ ಸಂಪ್ಯಾಡಿ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.