ಕಡಬ ಟೈಮ್ಸ್,ಬಿಳಿನೆಲೆ: ಬಿಳಿನೆಲೆ ಗ್ರಾಮದ ಬಿಳಿನೆಲೆ ಪೇಟೆಯಲ್ಲಿ ನಿರ್ಮಿಸಲಾದ ಅಕ್ರಮ ಶೆಡ್ ನ್ನು ತೆರವುಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ ನೇತೃತ್ವದ ತಂಡ ಬೆಂಬಲ ನೀಡಿದೆ.
ಪ್ರತಿಭಟನೆ ನಡೆಸುತ್ತಿದ್ದು ಅವರನ್ನು ಸಮಾಧಾನ ಪಡಿಸಿ ಪ್ರತಿಭಟನೆ ಹಿಂತೆಗೆದುಕೊಳ್ಳಲು ಮನವೊಲಿಸಿ ಬಳಿಕ ಅಕ್ರಮ ಶೆಡ್ ಗೆ ಬೀಗ ಜಡಿದು ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯುವಂತೆ ಅಧಿಕಾರಿಗಳು ಸೂಚಿಸಿದರು.
ಆದರೆ ಇದನ್ನು ಒಪ್ಪದ ಬಿಜೆಪಿ ನೇತೃತ್ವದ ತಂಡ ಬೀಗ ಜಡಿಯಲು ತಡೆಯೊಡ್ಡಿದೆ. ಇದೀಗ ಬಿಳಿನೆಲೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.ರಾಜಕೀಯ ಜಟಾಪಟಿ ನಡೆಯುತ್ತಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.