ಕಡಬ ಟೈಮ್ಸ್,ಉಪ್ಪಿನಂಗಡಿ: ಪರ್ಸ್ ಮತ್ತು ಮೊಬೈಲ್ ಕಳೆದು ಕೊಂಡು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ದಿಕ್ಕುತೋಚದೆ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಉಪ್ಪಿನಂಗಡಿಯ ಸಹೃದಯಿಗಳು ಸಹಾಯಾಸ್ತ ಮಾಡಿ ಮಾನವೀಯತೆ ಮೆರೆದಿದ್ದಾರೆ.
ತೀರ್ಥಹಳ್ಳಿಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಶಶಿಕುಮಾರ್ ಎಂಬವರು ಹಣ ಇದ್ದ ಪರ್ಸ್ ಮತ್ತು ಮೊಬೈಲ್ ಧರ್ಮಸ್ಥಳದಲ್ಲಿ ಕಳೆದು ಹೋಗಿದ್ದೆನ್ನಲಾಗಿದ್ದು, ಅಲ್ಲಿಂದ ಊರಿಗೆ ಹೋಗಲು ಬಸ್‌ಗೆ ಹಣ ಇಲ್ಲದ ಕಾರಣ ಅಲ್ಲಿದ್ದ ಲಾರಿ ಚಾಲಕರೋರ್ವರು ತನ್ನ ಲಾರಿಯಲ್ಲಿ ಉಪ್ಪಿನಂಗಡಿ ತನಕ ಕರೆ ತಂದಿದ್ದರೆನ್ನಲಾಗಿದೆ. ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಈ ವ್ಯಕ್ತಿ ತನ್ನ ಸಂಕಷ್ಟವನ್ನು ಬಸ್ ಏಜೆಂಟ್ ಗಣೇಶ್ ಜೊತೆ ಹಂಚಿಕೊಂಡಿದ್ದರು.
ಇವರ ಸಂಕಷ್ಟಕ್ಕೆ ಸ್ಪಂಧಿಸಿದ ಗಣೇಶ್ ಮತ್ತು ಸ್ಥಳೀಯ ಅಂಗಡಿ ಮಾಲಕ ಅಬುಸಾಲಿ ಮತ್ತು ಖಾಸಗಿ ಬಸ್ ಚಾಲಕ, ನಿರ್ವಾಹಕರು ಸೇರಿಕೊಂಡು ಶಶಿಕುಮಾರ್ ಅವರನ್ನು ಉಪಚರಿಸಿ, ಬಸ್ ವೆಚ್ಚ ನೀಡಿ ಬಸ್ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ.