ಕಡಬ ಟೈಮ್ಸ್, ನೆಲ್ಯಾಡಿ: ಕಡಬ ತಾಲೂಕಿನ ಪೆರಿಯಶಾಂತಿ ಪರಿಸರದಲ್ಲಿ ಒಂಟಿ ಕಾಡಾನೆ ಕಾಣಿಸಿಕೊಂಡ ತಿಂಗಳುಗಳ ಬಳಿಕ ಕಳೆದ ಎರಡು ದಿನಗಳಿಂದ ಡು ಪ್ರತ್ಯಕ್ಷಗೊಂಡಿದೆ.
ಈ ಪ್ರದೇಶದಲ್ಲಿ ಕೃಷಿಕರ ನಿದ್ದೆಗೆಡಿಸಿದ್ದು, ಜನರು ಭಯದಲ್ಲೇ ದಿನ ಕಳೆಯುವಂತಾಗಿದೆ. ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಆನೆಗಳ ಹಿಂಡು ಭತ್ತದ ಗದ್ದೆ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ಸಂಪೂರ್ಣವಾಗಿ ನಾಶಮಾಡುತ್ತಿದೆ. ಈ ನಾಲ್ಕು ಆನೆಗಳ ಹಿಂಡು ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್, ಇಬ್ರಾಹಿಂ, ನಾರಾಯಣ ಎಂಬುವವರ ತೋಟಗಳಿಗೆ ಮತ್ತು ದೇವದಾಸ್, ಹೊನ್ನಪ್ಪ ಎಂಬವರ ಗದ್ದೆಗೆ ನುಗ್ಗಿ ಸಂಪೂರ್ಣ ಬೆಳೆ ನಾಶ ಮಾಡಿದೆ.
.ಸ್ಥಳೀಯರು ಈ ಬಗ್ಗೆ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡುವ ಮೂಲಕ ಗಮನಕ್ಕೆ ತರಲಾಗಿದೆ. ಆದರೆ ಈತನಕ ಕಾಡಾನೆಗಳಿಂದಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.