ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ವಾಹನ ಚಲಾಯಿಸಿಸಲು ಯತ್ನಿಸಿದ ಚಾಲಕ
ಕಡಬ ಟೈಮ್ಸ್, ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಶನಿವಾರ ಮೂಂಜಾನೆ ನಡೆದಿದೆ.
ನೆಲ್ಯಾಡಿಯಿಂದ ಉಪ್ಪಿನಂಗಡಿಯತ್ತ ಕ ಬರುತ್ತಿದ್ದ ಪಿಕಪ್ ಕಾಂಚನ ಕ್ರಾಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಹೊಳೆಗೆ ಬಿದ್ದಿದೆ.
ಚಾಲಕ ಆರೀಫ್ ಕೂಡಲೇ ಪಿಕಾಪ್ ವಾಹನದಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ಅಲ್ಲಿನ ನಿವಾಸಿಗಳ ಸಹಕಾರದಿಂದ ಪಿಕಪನ್ನು ಹೊಳೆಯಿಂದ ಎಳೆದು ಮೇಲಕ್ಕೆ ತರಲಾಗಿದೆ.