ಕಡಬ ಟೈಮ್ಸ್, ಕಾಣಿಯೂರು: ಇತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಮನೆಯಂಗಳದ ಧರೆ ಕುಸಿತಗೊಂಡ ಘಟನೆ ಚಾರ್ವಾಕ ಗ್ರಾಮದ ಕೆಳಗಿನಕೇರಿಯಲ್ಲಿ ನಡೆದಿದೆ.
ಚಂದಪ್ಪ ಗೌಡರ ಮನೆಯಂಗಳದ ಧರೆಯು ಕುಸಿದಿದ್ದು, ಸೋಮವಾರ ಸುರಿದ ಮಳೆಗೆ ಮತ್ತಷ್ಟು ಧರೆ ಕುಸಿತಗೊಂಡು ನಷ್ಟ ಸಂಭವಿದೆ.
ಘಟನಾ ಸ್ಥಳಕ್ಕೆ ಘಟನಾ ಸ್ಥಳಕ್ಕೆ ಬೆಳಂದೂರು ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಗ್ರಾಮಕರಣಿಕರಾದ ಪುಷ್ಪರಾಜ್, ಕಾಣಿಯೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.