ಕಡಬ ಟೈಮ್ಸ್, ಕಾಣಿಯೂರು: ಕಾಣಿಯೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಪಿಡಿಒ ಜಯಪ್ರಕಾಶ್ ಅವರಿಗೆ ಕಾಣಿಯೂರು ಗ್ರಾಮದ ನಾವೂ್ರಿನ ತೇಜಪ್ರಸಾದ್ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪಿಡಿಓ ಠಾಣೆಗೆ ದೂರು ನೀಡಿದ್ದಾರೆ. ಜುಲೈ 22 ರಂದು ಕಾಣಿಯೂರು ಗ್ರಾ.ಪಂ ಆಡಳಿತಾಧಿಕಾರಿ ಡಾ. ಕೆ.ಎಂ. ಗುರುಮೂರ್ತಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮಾತನಾಡಿದ ವ್ಯಕ್ತಿಯ ವಾಯ್ಸ್ ರೆಕಾರ್ಡ್ ನ್ನು ಆಡಳಿತಾಧಿಕಾರಿಯವರು ಪಿಡಿಒ ಮೊಬೈಲ್‌ಗೆ ರವಾನಿಸಿದ್ದಾರೆ.
ವಾಯ್ಸ್ ರೆಕಾರ್ಡ್‌ನಲ್ಲಿ ಕೊಲೆ ಬೆದರಿಕೆ ಹಾಕಿರುವುದು ಸ್ಪಷ್ಟವಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಿ ಕರ್ತವ್ಯಕ್ಕೆ ರಕ್ಷಣೆ ಒದಗಿಸುವಂತೆ ಠಾಣೆಗೆ ನೀಡಿರುವ ದೂರಿನಲ್ಲಿ ಪಿಡಿಒ ತಿಳಿಸಿದ್ದಾರೆ.