ಕಡಬ ಟೈಮ್ಸ್, ಕಾಣಿಯೂರು: ತಾಲೂಕಿನ ಕಾಣಿಯೂರು ನಿವಾಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೊರೋನಾ ಸೋಂಕಿತ 52 ವರ್ಷದ ವ್ಯಕ್ತಿ ಶುಕ್ರವಾರ ಮೃತ ಪಟ್ಟಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿ ಡಯಾಲಿಸೀಸ್ ಮಾಡುತ್ತಿದ್ದು ಆಗಸ್ಟ್ .4ರಂದು ಮಂಗಳೂರಿನ ಖಾಸಗಿ ಕ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಆ.5ರಂದು ಅವರ ಕೋವಿಡ್ ವರದಿಯಲ್ಲಿ ಸೋಂಕು ದೃಢಪಟ್ಟ ವರದಿ ಬಂದಿತ್ತು. ಹಾಗಾಗಿ ಅಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಮೃತ ದೇಹವನ್ನು ಕಾಣಿಯೂರಿಗೆ ತಂದು ಕೋವಿಡ್ ನಿಯಮಾವಳಿಯಂತೆ ಅಂತ್ಯಕ್ರೀಯೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.