Home ಪ್ರಮುಖ ಸುದ್ದಿ ಕಡಬ:ಪೆರಾಬೆ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ಕಡಬ ತಹಸೀಲ್ದಾರ್ ಕಚೇರಿ ಎದುರು...

ಕಡಬ:ಪೆರಾಬೆ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ಕಡಬ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ

1
0

ಒಂದು ವಾರದೊಳಗೆ ಈ ಸರಕಾರಿ ಭೂಮಿಯನ್ನು ಕಂದಾಯ ಇಲಾಖೆ ಸ್ವಾಧೀನ ಪಡೆದುಕೊಳ್ಳದಿದ್ದರೆ ಉಗ್ರ ಹೋರಾಟ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಪೆರಾಬೆ ಗ್ರಾಮದಲ್ಲಿ ಬಾಲಕೃಷ್ಣ ಪೂಜಾರಿ ಎಂಬವರು ಒತ್ತುವರಿ ಮಾಡಿಕೊಂಡ ಸರಕಾರಿ ಭೂಮಿಯನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದಲಿತ್ ಸೇವಾ ಸಮಿತಿ ವತಿಯಿಂದ ಕಡಬ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

UNIC-KADABA

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಈಗಾಗಲೇ ಈ ಭೂಮಿಗೆ ಸಂಬಂಧಿಸಿದಂತೆ ಎಸಿಯವರು ಯಥಾಸ್ಥಿತಿ ಆದೇಶ ನೀಡಿದ್ದಾರೆ ಆದರೂ ಅಲ್ಲಿ ಆದೇಶ ಪಾಲನೆಯಾಗುತ್ತಿಲ್ಲ ಎಂದರು. ಒಂದು ವಾರದೊಳಗೆ ಈ ಸರಕಾರಿ ಭೂಮಿಯನ್ನು ಕಂದಾಯ ಇಲಾಖೆ ಸ್ವಾಧೀನ ಪಡೆದುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಬಳಿಕ ನಡೆಯುವ ಯಾವುದೇ ಅಹಿತಕರ ಘಟನೆಗೆ ಕಡಬ ತಹಸೀಲ್ದಾರ್ ಹೊಣೆ ಎಂದು ಹೇಳಿದರು.

GURUJI ADD

ಈ ಸಂದರ್ಭದಲ್ಲಿ ಅಣ್ಣಿ ಎಳ್ತಿಮಾರ್,ಧನಂಜಯ ಬಲ್ನಾಡು,ಕೇಶವ ಕುಪ್ಲಾಜೆ,ಬಿ.ಕೆ.ಅಣ್ಣಪ್ಪ, ಗೋಪಾಲ ನೇರಳಕಟ್ಟೆ, ಕೆ.ಪಿ. ಆನಂದ,ಮನೋಹರ್ ಕೋಡಿಜಾಲು, ಮಣಿ ರೆಂಜರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here