ಕಡಬ ಟೈಮ್ಸ್, ಮನೋರಂಜನೆ: ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಪುಟ್ಟ ಬಾಲೆಯೊಬ್ಬಳು ಸಿನೆಮಾದಲ್ಲಿ ಬಣ್ಣ ಹಚ್ಚಿ ಈಗ ಸುದ್ದಿಯಾಗುತ್ತಿದ್ದಾಳೆ.
ಹೌದು ,ಭರತ ನಾಟ್ಯ, ಪ್ಯೂಶನ್ ಪಿಲ್ಲ್ಮಿ ಡಾನ್ಸ್, ಹಿಂದುಸ್ತಾನಿ, ಸುಗಮ ಸಂಗೀತ, ಚಿತ್ರ ರಚನೆ, ಕರಾಟೆ ಹೀಗೆ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿರುವ ಈಕೆಯ ಹೆಸರು ಸಾನ್ವಿ ಕಂಡೂರು. ಸೂರಜ್ ಶೆಟ್ಟಿ ನಿರ್ದೇಶನದ ಇಂಗ್ಲಿಷ್ ಎಂಕ್ಲೆ ಬರ್ಪುಜಿ ಬ್ರೋ” ತುಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾಳೆ. 2020 ಮಾರ್ಚ್ 20 ಕ್ಕೆ ಬಿಡುಗಡೆಗೊಳ್ಳಬೇಕಿದ್ದಈ ಸಿನೆಮಾ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿದ್ದು ಸದ್ಯದಲ್ಲೇ ತೆರೆಕಾಣಲಿದೆ. ಇನ್ನು ತೃಪ್ತಿ ಅಭಿಕಾರ ನಿರ್ದೇಶನದ “ನಲ್ಕೆ” ಎಂಬ ಕನ್ನಡ ಸಿನೆಮಾದಲ್ಲಿಯೂ ಅಭಿನಯ ಮಾಡಿದ್ದಾಳೆ.
ಪ್ರಮೀಳಾ ಲೋಕೇಶ್ ಈಕೆಯ ಭರತನಾಟ್ಯ ಗುರುಗಳು. ಸಂಗೀತ ಗುರುಗಳಾದ ರಘು ಬಿಜೂರು ಅವರ ಜೊತೆ ಹಿಂದುಸ್ತಾನಿ, ಸುಗಮ ಸಂಗೀತ ಅಭ್ಯಾಸ ಮತ್ತು ಶ್ರೀ ವಸಂತ ಕಾಯರ್ತೋಡಿ ಇವರ ಶಿಷ್ಯೆಯಾಗಿ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನ ಮೆಚ್ಚುಗೆ ಗಳಿಸಿದ್ದಾರೆ. ರಾಜೇಶ್ ಕಂಡೂರು ಮತ್ತು ಮೈನಾ ರಾಜೇಶ್ ಕಂಡೂರು ದಂಪತಿಗಳ ಪುತ್ರಿಯಾಗಿರುವ ಈಕೆಗೆ ನಟನೆ ನನ್ನ ಇಷ್ಟದ ಹವ್ಯಾಸದ ಭಾಗ ಎನ್ನುತ್ತಾಳೆ ಸಾನ್ವಿ