ಕಡಬ ಟೈಮ್ಸ್, ಎಡಮಂಗಲ :ಎಣ್ಮೂರು ಗ್ರಾ.ಪಂ ವ್ಯಾಪ್ತಿಗೆ ಎಣ್ಮೂರು ಗ್ರಾಮ ಮತ್ತು ಮುರುಳ್ಯ ಗ್ರಾಮಗಳು ಸೇರಿತ್ತು.ಆದರೆ ಎಣ್ಮೂರು ಎಡಮಂಗಲ ಗ್ರಾಮ ಪಂಚಾಯತ್ ನ ಭಾಗವಾಗಲಿದೆ.
ಬುಧವಾರದಂದು ಸುಳ್ಯ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಅವರು ತಾಲೂಕು ಪಂಚಾಯತ್ ನ ಸಹಾಯಕ ಲೆಕ್ಕಾಧಿಕಾರಿ ಹರೀಶ್ ರಾವ್ ರೊಂದಿಗೆ ಎಣ್ಮೂರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಎಣ್ಮೂರು ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಎಡಮಂಗಲ ಗ್ರಾ.ಪಂ ಗೆ ಹಸ್ತಾಂತರಿಸಿದ್ದಾರೆ.
ಎಣ್ಮೂರು ಗ್ರಾಮದ ಜನರು ಎಲ್ಲಾ ವ್ಯವಹಾರಗಳಿಗೆ ಇನ್ನು ಮುಂದಕ್ಕೆ ಎಡಮಂಗಲ ಗ್ರಾಮ ಪಂಚಾಯತ್ ಅನ್ನು ಸಂಪರ್ಕಿಸಲು ತಿಳಿಸಲಾಗಿದೆ. ಮುರುಳ್ಯ ಗ್ರಾಮ ಪಂಚಾಯಿತಿಯು ಮುಂದಿನ ಆದೇಶದವರೆಗೂ ಹಳೇ ಎಣ್ಮೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ಇ.ಒ. ತಿಳಿಸಿದ್ದಾರೆ .