ಕಡಬ ಟೈಮ್ಸ್,ಕಾಣಿಯೂರು: ಕೊಡಿಯಾಲ ಗ್ರಾಮದ ಕುಕ್ಕುಮಜಲು ಎಂಬಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಕಾಣಿಯೂರಿನ ಕುಮೇರು ಮನೆಯ ಸುಭಾಷಿಣಿ (46) ಎಂಬವರು ಮೃತಪಟ್ಟವರು.
ಮೃತ ಮಹಿಳೆಯು ಕೂಲಿ ಕೆಲಸದ ಬಗ್ಗೆ ವಿಚಾರಿಸಲು ಹತ್ತಿರದ ಮನೆಗೆ ಹೋಗಿ ವಾಪಾಸು ಮನೆಗೆ ಬರುವಾಗ ಕಾಲು ಜಾರಿ ಕೆರೆಗೆ ಬಿದ್ದುಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.