ಕಡಬ ಟೈಮ್ಸ್, ಸುಬ್ರಹ್ಮಣ್ಯ: ಕೊರೋನಾ ಪಾಸಿಟಿವ್ ಕಂಡುಬಂದಿರುವ ಪುತ್ತೂರಿನ ಮೂವರು ಪೋಲೀಸರನ್ನು ಸುಬ್ರಮಣ್ಯದ ಅಭಯ ವಸತಿ ಗೃಹಕ್ಕೆ ದ.ಕ ಜಿಲ್ಲಾಡಳಿತ ಗುರುವಾರ ಅಪರಾಹ್ನ ಸ್ಥಳಾಂತರಿಸಿದೆ.
ಪುತ್ತೂರಿನಲ್ಲಿ ಕೊರೊನಾ ಪಾಸಿಟಿವ್ ಬಂದಿರುವ ವ್ಯಕ್ತಿಗಳನ್ನು ಸುಬ್ರಹ್ಮಣ್ಯಕ್ಕೆ ಸ್ಥಳಾಂತರಿಸುವುದಕ್ಕೆ ಸಾರ್ವಜನಿಕರಿಂದ ಮತ್ತು ರಾಜಕೀಯ ಮುಂದಾಳುಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಅಲ್ಲದೆ ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಭಕ್ತರು ಮತ್ತು ಊರವರು ಆತಂಕದಿಂದ ಜೀವನ ಮಾಡುವ ಸನ್ನಿವೇಶವನ್ನು ಜಿಲ್ಲಾಡಳಿತ ಸೃಷ್ಟಿ ಮಾಡುತ್ತಿದೆ. ಈ ಬಗ್ಗೆ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದೆ ನಡೆಯಬಹುದಾದ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ಎಚ್ಚರಿಸಿದ್ದರು.