ಕಡಬ ಟೈಮ್ಸ್, ರಾಮಕುಂಜ: ಇಲ್ಲಿನ ಕೊಯಿಲ ಗ್ರಾಮದ ಆತೂರು ಬೈಲಿನ ರಬ್ಬರ್ ತೋಟವೊಂದರಲ್ಲಿ ಅಕ್ರಮವಾಗಿ ಜಾನುವಾರು ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಕಡಬ ಪೊಲೀಸರು ಗುರುವಾರ ಮುಂಜಾನೆ ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾರೆ.
ರಜಾಕ್ ಎಂಬವರಿಗೆ ಸೇರಿದ ರಬ್ಬರ್ ತೋಟದಲ್ಲಿ ಅಕ್ರಮ ಜಾನುವಾರಗಳ ಮಾಂಸ ಮಾರಾಟದಲ್ಲಿ ತೊಡಗಿದ್ದರು. ಸ್ಥಳದಲ್ಲಿದ್ದ ಆರೋಪಿ ಮಹಮ್ಮದ್ ಮುಕ್ಸಿನ್ ಎಂಬಾತ ಸೆರೆ ಸಿಕ್ಕಿದ್ದು ಮತ್ತೊಬ್ಬ ಆರೋಪಿ ಇಲ್ಯಾಸ್ ಪರಾರಿಯಾಗಿದ್ದಾನೆ. ಘಟನಾ ಸ್ಥಳದಿಂದ ಪ್ಲಾಸ್ಟಿಕ್ ಕವರ್ನಲ್ಲಿ ತೂಕ ಮಾಡಿ ಕಟ್ಟಿದ್ದ ಮಾಂಸದ ಕಟ್ಟುಗಳು ಹಾಗೂ ಪ್ಲಾಸ್ಟಿಕ್ ಟಾರ್ಪಲ್ ಮೇಲೆ ಪ್ಯಾಕ್ ಮಾಡಲು ಬಾಕಿಯಿದ್ದ ಸುಮಾರು ೧೫ ಕೆ.ಜಿ. ತೂಕದ ದನದ ಮಾಂಸವನ್ನು ಪೊಲೀಸರು ಸ್ವಾದೀನ ಪಡಿಸಿಕೊಂಡರಲ್ಲದೆ ಮಾಂಸ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸ್ವಾಧೀನ ಪಡಿಸಿಕೊಂಡ ದನದ ಮಾಂಸದ ಅಂದಾಜು ಮೌಲ್ಯ ೧೬.೨೫೦ ರೂ.ಎಂದು ಅಂದಾಜಿಸಲಾಗಿದೆ ಆರೋಪಿಗಳಾದ ಇಲ್ಯಾಸ್, ಮಹಮ್ಮದ್ ಮುಕ್ಸಿನ್ ಹಾಮತ್ತು ರಜಾಕ್ರವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಡಬ ಎಸ್.ಐ.ರುಕ್ಮ ನಾಯ್ಕ್ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಸುರೇಶ್, ಬೀಟ್ ಪೊಲೀಸ್ ಆಗಿರುವ ಹೆಡ್ಕಾನ್ಸ್ಸ್ಟೇಬಲ್ ಹರೀಶ್, ಕಾನ್ಸ್ಸ್ಟೇಬಲ್ ಭವಿತ್ ರೈ ಪಾಲ್ಗೊಂಡಿದ್ದರು.