Home ಪ್ರಮುಖ ಸುದ್ದಿ ಮರ್ದಾಳ: ರಬ್ಬರ್ ಕಾರ್ಮಿಕರ ಜೊತೆ ಶಾಸಕರ ಸಂವಾದ l ಅರಣ್ಯ ಸಚಿವರನ್ನೇ ರಬ್ಬರ್ ಪ್ಲಾಂಟೇಶನ್ ಗೆ ಕರೆಸಲಾಗುವುದು-ಶಾಸಕ...

ಮರ್ದಾಳ: ರಬ್ಬರ್ ಕಾರ್ಮಿಕರ ಜೊತೆ ಶಾಸಕರ ಸಂವಾದ l ಅರಣ್ಯ ಸಚಿವರನ್ನೇ ರಬ್ಬರ್ ಪ್ಲಾಂಟೇಶನ್ ಗೆ ಕರೆಸಲಾಗುವುದು-ಶಾಸಕ ಎಸ್. ಅಂಗಾರ ಭರವಸೆ

ಕಡಬ ಟೈಮ್ಸ್, ಮರ್ದಾಳ : ಇತ್ತೀಚೆಗೆ ರಬ್ಬರ್ ನಿಗಮದಲ್ಲಿ ಮದ್ದು ಸಿಂಪಡಣೆಯಲ್ಲಿ ಅವ್ಯವಹಾರ ನಡೆದಿರುವ ಕುರಿತಂತೆ ಕಾರ್ಮಿಕರನ್ನೇ ಕೆಲಸದಿಂದ ವಜಾ ಮಾಡಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎಸ್. ಅಂಗಾರ ಅವರ ನೇತೃತ್ವದಲ್ಲಿ ಐತ್ತೂರು ಗ್ರಾ.ಪಂ ಸಭಾಂಗಣದಲ್ಲಿ ಶುಕ್ರವಾರ ಸಭೆ ನಡೆಯಿತು.

UNIC-KADABA

ನಡೆದ ಸಭೆಯಲ್ಲಿ ಕಾರ್ಮಿಕರು ಅರಣ್ಯ ನಿಗಮದಲ್ಲಿ ನಡೆದ ಬೆಳವಣಿಗೆಯನ್ನು ವಿವರಿಸಿದರು. ರಬ್ಬರ್ ಕಾರ್ಮಿಕರ ಸಮಸ್ಯೆಯನ್ನು ಶಾಸಕರು ಆಲಿಸಿ ಬಳಿಕ ಮಾತನಾಡಿ , ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ಬೇಡ, ಈ ಬಗ್ಗೆ ಈಗಾಗಲೇ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆಯಾಗಿದ್ದು ಅಧಿಕಾರಿಗಳಿಂದ ಉತ್ತರ ಇನ್ನಷ್ಟೇ ಬರಬೇಕಿದೆ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಅರಣ್ಯ ಸಚಿವರನ್ನೇ ರಬ್ಬರ್ ಪ್ಲಾಂಟೇಶನ್ ಗೆ ಕರೆಸಿ ವಾಸ್ತವತೆಯನ್ನು ಮನವರಿಗೆ ಮಾಡಲಾಗುವುದು, ಸಚಿವರ ದಿನಾಂಕ ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾವುದು ಎಂದರು.

GURUJI ADD

ಸಭೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಉಪಾಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ , ಮಾಜಿ ಗ್ರಾ.ಪಂ ಅಧ್ಯಕ್ಷ ಸತೀಶ್ ಪೂಜಾರಿ, ಎಪಿಎಂಸಿ ಮಾಜಿ ಸದಸ್ಯ ಸೀತರಾಮ ಪೊಸವಳಿಕೆ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here