ಕಡಬ ಟೈಮ್ಸ್, ಕನಕ ಮಜಲು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ಪಕ್ಕದಲ್ಲಿದ್ದ ಬಾವಿಯೊಂದು ಕುಸಿತಗೊಂಡ ಘಟನೆ ಕನಕಮಜಲು ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಸುಣ್ಣಮೂಲೆಯ ಹಸನ್ ಎಂಬವರ ಮನೆಯ ಆವರಣದಲ್ಲಿದ್ದ ಸುಮಾರು ಐವತ್ತು ವರ್ಷಗಳ ಹಿಂದಿನ ಬಾವಿಯ ಕಟ್ಟೆ ಸಮೇತ ಕುಸಿದು ನೀರಿಗೆ ಬಿದ್ದಿದೆ. ಇದರ ಪರಿಣಾಮ ಬಾವಿ ಕೆಸರು ನೀರಿನಿಂದ ಅರ್ಧದಷ್ಟು ಮುಚ್ಚಿದೆ.
ನಿತ್ಯ ಬಳಕೆಗಾಗಿ ಈ ಬಾವಿಯ ನೀರನ್ನು ಬಳಸುತ್ತಿದ್ದ ಮನೆಯವರು ಇದೀಗ ಬೋರ್ ವೆಲ್ ನೀರನ್ನು ಆಶ್ರಯಿಸುವಂತಾಗಿದೆ.