ಕಡಬ ಟೈಮ್ಸ್, ಮುಖ್ಯ ಸುದ್ದಿ:ಹಲವು ಪ್ರಕರಣ ಗಳಲ್ಲಿ ಭಾಗಿಯಾಗಿರುವ ಅಜ್ಜಾವರದ ಆರೋಪಿ ತಲೆ ಮರೆಸಿಕೊಂಡಿದ್ದು ಈತ ಇರುವ ಸ್ಥಳದ ಮಾಹಿತಿ ನೀಡಿದರೆ 2 ಲಕ್ಷ ರೂ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಆರೋಪಿ ಸುಳ್ಯದ ಅಜ್ಜಾವರ ಗ್ರಾಮ ನಿವಾಸಿ ಅಝೀಜ್ ಎಂದು ಗುರುತಿಸಲಾಗಿದೆ.ಈತ ಕಾಸರಗೋಡು ಮಹಿಳೆಯ ಕೊಲೆ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ದ ಸುಳ್ಯ ಪೋಲೀಸ್ ಠಾಣೆಯ ಲ್ಲಿಯೂ ಎರಡು ಪ್ರಕರಣಗಳಿದೆ.
ಈ ಆರೋಪಿ ಯ ಪತ್ತೆಗೆ ಸಾರ್ವಜನಿಕರು ಮಾಹಿತಿ ನೀಡಿ ಇಲಾಖೆ ಜೊತೆ ಸಹಕ್ರಿಸುವಂತೆ ಸುಳ್ಯ ಎಸ್.ಐ.ಯವರು ತಿಳಿಸಿದ್ದಾರೆ.