ಕಡಬ ಟೈಮ್ಸ್,ಪಂಜ: ಇಲ್ಲಿನ ಬಳ್ಪ ಮೀಸಲು ಅರಣ್ಯದಲ್ಲಿ ಮರ ಕಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಮನೋಜ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಮೀಸಲು ಅರಣ್ಯ ದಿಂದ ಒಣಗಿದ ಸಾಗುವಾನಿ ಮರ ಕಡಿದು ಸಾಗಿದ್ದಾರೆಂಬ ಮಾಹಿತಿ ಪಡೆದು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಪಂಜ ಅರಣ್ಯ ಇಲಾಖೆಯ ರೇಂಜರ್ ಗಿರೀಶ್ ಆರ್., ಉಪ ವಲಯಾರಣ್ಯಾಧಿಕಾರಿ ರವಿಪ್ರಕಾಶ್, ಸಿಬ್ಬಂದಿಗಳಾದ ಧರಣಪ್ಪ, ದಿನೇಶ್ ಕಾರ್ಯಾಚರಣೆ ಯಲ್ಲಿ ತೊಡಗಿಸಿಕೊಂಡಿದ್ದರು.