ಕಡಬ ಟೈಮ್ಸ್, ನೂಜಿಬಾಳ್ತಿಲ:ಗ್ರಾಮೀಣ ಪ್ರದೇಶವೊಂದರ ಲಕ್ಷ ರೂ ಮೊತ್ತಕ್ಕೆ ಹರಾಜಾಗಿ ಕುತೂಹಲಕ್ಕೆ ಕ್ಕೂ ಕಾರಣವಾಗಿದೆ. ಪ್ರತೀ ವರ್ಷ ರೂ.10ರಿಂದ 12 ಸಾವಿರಕ್ಕೆ ಏಲಂ ಆಗುತ್ತಿದ್ದ ನೂಜಿಬಾಳ್ತಿಲ ಗ್ರಾಮದ ಹಸಿ ಮೀನು ಮಾರುಕಟ್ಟೆ2020-21ನೇ ಸಾಲಿಗೆ ಮೊತ್ತಕ್ಕೆ ಏಲಂ ಆಗಿದ್ದು ಆಗಿ ಅಚ್ಚರಿ ಮೂಡಿಸಿದೆ.
ಗ್ರಾ.ಪಂ ನಿಗದಿಪಡಿಸಿದ ರೂ 10 ಸಾವಿರ ಮೊತ್ತವನ್ನು ಅರ್ಹತಾ ಠೇವಣಿಯಾಗಿ ಇಟ್ಟಿದ್ದವರಿಗೆ ಮಾತ್ರ ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡವರು ಪ್ರತೀ ವರ್ಷದಂತೆ ಸಣ್ಣ ಮೊತ್ತದಿಂದ ಬಿಡ್ಡಿಗ್ ಕರೆಯಲು ಆರಂಭಿಸಿದರು. ಬಿಡ್ಡುದಾರರು ತಮ್ಮ ಪಾಲಿಗೆ ಹಸಿ ಮೀನು ಮಾರುಕಟ್ಟೆಯನ್ನು ಪಡದುಕೊಳ್ಳಬೇಕೆಂಬ ಉದ್ದೇಶಕ್ಕೆ ಬಿಡ್ಡಿಂಗ್ ಮೊತ್ತವನ್ನು ಹೆಚ್ಚಿಸುತ್ತಲೇ ಹೋದರು. ಲಕ್ಷ ಮೊತ್ತ ದಾಟಿದರೂ ಪೈಪೋಟಿ ಮುಂದುವರೆದಿತ್ತು. ಕೊನೆಗೆ ಸಜಿ ವಿಜೆ ಅವರು ಮಾರುಕಟ್ಟೆಯನ್ನು ಮುಂದಿನ ಒಂದು ವರ್ಷದ ಅವಧಿಗೆ ಏಲಂನಲ್ಲಿ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಸದ್ರಿ ಮಾರುಕಟ್ಟೆ ಕೇವಲ ರೂ.6,700 ಕ್ಕೆ ಏಲಂ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರೂ 1,79,500ಕ್ಕೆ ಹರಾಜಾಗಿರುವುದು ದಾಖಲೆಯೇ ಸರಿ.ಹಸಿ ಮೀನು ಮಾರುಕಟ್ಟೆ ಏಲಂ ಪ್ರಕ್ರಿಯೆ ಸೋಮವಾರ ನೂಜಿಬಾಳ್ತಿಲ ಗ್ರಾ.ಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಭರತ್ ಬಿ.ಎಂ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ಗ್ರಾ.ಪಂ ಪಿಡಿಒ ಆನಂದ ಎ ಏಲಂ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ.