ಕಡಬ ಟೈಮ್ಸ್, ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿರುವ ಲಕ್ಷ್ಮೀ ಹೆಸರಿನ ಆನೆ ಜುಲೈ 1 ರಂದು ಹೆಣ್ಣು ಮರಿಗೆ ಜನ್ಮ ನೀಡಿದೆ.
ಸಾಮಾನ್ಯವಾಗಿ ಗಜಗರ್ಭ ಎಂದೇ ಪ್ರಖ್ಯಾತಿಯಾಗಿರುವಂತೆ ಸುಮಾರು 20 ತಿಂಗಳ ಧೀರ್ಘ ಗರ್ಭಾವಸ್ಥೆಯ ಬಳಿಕ ಹೆಣ್ಣು ಮರಿಗೆ ಜನ್ಮ ನೀಡಿದೆ.
ಅರಣ್ಯ ಇಲಾಖೆ, ಧರ್ಮಸ್ಥಳ ಗ್ರಾಮದ ಪಶು ವೈದ್ಯಾಧಿಕಾರಿಯು ನಿಕಟವಾಗಿ ಪರಿಶೀಲಿಸುತ್ತಾ ಸೂಕ್ತ ಎಚ್ಚರಿಕೆ ವಹಿಸಿ ಸಹಕರಿಸಿದ್ದಾರೆ ಎಂದು ದೇವಳದ ಪಾರುಪತ್ಯಗಾರರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಬನ್ನೇರುಘಟ್ಟದಲ್ಲಿ ಸುಮಾರು 2 ವರ್ಷಕ್ಕೆ ಹಿಂದೆ ಕಾಡಾನೆ ಜೊತೆಗೆ ಜೋಡಿಗೆ ಕಳುಹಿಸಲಾಗಿತ್ತು.