ಕಡಬ ಟೈಮ್ಸ್ ,ಕಲ್ಲುಗುಡ್ಡೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾನ್ಸರ್ ಪೀಡಿತರಿಗೆ ಧನಸಹಾಯವನ್ನು ಸೋಮವಾರ ವಿತರಿಸಲಾಯಿತು.
ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿ ಯೋಜನಾಧಿಕಾರಿ ಸುರೇಂದ್ರ ಅವರು ಯೋಜನೆಯಿಂದ ಮಂಜೂರಾದ ಧನಸಹಾಯ ಚೆಕ್‍ನ್ನು ಫಲಾನುಭವಿಗಳಾದ ಕೊಣಾಜೆ ಗ್ರಾಮದ ಈಶ್ವರ ಗೌಡ ಹಾಗೂ ಲಿಂಗಪ್ಪ ಗೌಡ, ಕೊಂಬಾರು ಗ್ರಾಮದ ಯೋಜನೆಯ ಸದಸ್ಯ ಆನಂದ ಗೌಡರ ಪತ್ನಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್., ವಲಯ ಮೇಲ್ವಿಚಾರಕರಾದ ಧರ್ಣಪ್ಪ ಗೌಡ, ಒಕ್ಕೂಟ ಅಧ್ಯಕ್ಷ ಪುಂಡರೀಕಾಕ್ಷ, ಸಾಂತಪ್ಪ ಗೌಡ ಸಿರಿಬಾಗಿಲು, ಸೇವಾಪ್ರತಿನಿಧಿ ರೂಪಾ, ವಿನೋದ್ ಕೆ.ಸಿ., ಯೋಜನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.