ಕಡಬ ಟೈಮ್ಸ್, ಎಡಮಂಗಲ: ನದಿಗೆ ಮೀನು ಹಿಡಿಯಲು ತೆರಳಿದ ಯುವಕನೊಬ್ಬ ನೀರುಪಾಲಾದ ಘಟನೆ ಎಡಮಂಗಲದಲ್ಲಿ ನಡೆದಿದೆ.
ಎಡಮಂಗಲದ ದೋಳ್ತಿಲ ರಾಮಣ್ಣ ನಾಯ್ಕರ ಮಗ ಪ್ರಕಾಶ್ (25) ನೀರುಪಾಲಾದ ಯುವಕ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.