Home ಪ್ರಮುಖ ಸುದ್ದಿ ಇಚಿಲಂಪಾಡಿ:ರಸ್ತೆ ಬದಿ ತ್ಯಾಜ್ಯ ಎಸೆಯುವವರ ಮಾಹಿತಿ ನೀಡಿದವರಿಗೆ ಸಿಗಲಿದೆ 2,000 ನಗದು ಬಹುಮಾನ

ಇಚಿಲಂಪಾಡಿ:ರಸ್ತೆ ಬದಿ ತ್ಯಾಜ್ಯ ಎಸೆಯುವವರ ಮಾಹಿತಿ ನೀಡಿದವರಿಗೆ ಸಿಗಲಿದೆ 2,000 ನಗದು ಬಹುಮಾನ

ಕಡಬಟೈಮ್ಸ್,ಇಚಿಲಂಪಾಡಿ:ಪೆರಿಯಶಾಂತಿಯಿಂದ ಇಚಿಲಂಪಾಡಿವರೆಗಿನ  ರಾಜ್ಯ ರಸ್ತೆಯ ಬದಿಗಳಲ್ಲಿ  ಕಿಡಿಗೇಡಿಗಳು ಕಸ,  ತ್ಯಾಜ ತಂದು   ಎಸೆಯುತ್ತಿದ್ದು ಅಂತವರ ದಾಖಲೆ ಸಹಿತ ಮಾಹಿತಿ ನೀಡಿದವರಿಗೆ ನೀತಿ ತಂಡ 2,000 ರೂ ನಗದು ಬಹುಮಾನ ನೀಡಲಿದೆ.

UNIC-KADABA

ನೀತಿ ತಂಡದ ರಾಜ್ಯಾಧ್ಯಕ್ಷ  ಜಯನ್ ಟಿ ಈ ಬಹುಮಾನ  ಘೋಷಣೆ ಮಾಡಿದ್ದು  ಸಾರ್ವಜನಿಕರು  ಸಂಚರಿಸುವ ರಸ್ತೆಯನ್ನು ತ್ಯಾಜ್ಯ ಮುಕ್ತವನ್ನಾಗಿಸುವುದು ಬಹುಮಾನದ ಹಿಂದಿನ ಉದ್ದೇಶವಾಗಿದೆ.  ಸಾರ್ವಜನಿಕರು  ಕಸ ಎಸೆಯುವವರ ಪೋಟೊ,ವೀ ಡಿಯೋ ಅಥವಾ ಪೂರಕ ದಾಖಲೆ ನೀಡಬಹುದಾಗಿದೆ. ವಾಟ್ಸಪ್ ನಂಬರ್  9731567067  ಈ ಸಂಖ್ಯೆಗೆ ಮಾಹಿತಿ ಕಳುಹಿಸಿ  ಈ ಬಹುಮಾನ ಪಡೆಯಬಹುದಾಗಿದೆ.

GURUJI ADD

ಗ್ರಾ.ಪಂ ಗಳು ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರೂ ಜನರು ಮಾತ್ರ ಜಾಗೃತರಾಗುತ್ತಿಲ್ಲ,ಎಲ್ಲೆಂದರಲ್ಲಿ ‌ತ್ಯಾಜ್ಯ ಬಿಸಾಡಿ ಪರಿಸರ ಮಾಲಿನ್ಯ ಮಾಡಿ ಸಾಂಕ್ರಾಮಿಕ ರೋಗ ಹರಡಲು ಕಾರಣ ರಾಗುತ್ತಿದ್ದಾರೆ.ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಸಂಪರ್ಕಕೊಂಡಿ ರಸ್ತೆಯಾಗಿರುವ ಈ  ರಸ್ತೆಯ ಪರಿಸರವನ್ನು ಸ್ವಚ್ಚವಾಗಿಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಜಯನ್ ಕಡಬ ಟೈಮ್ಸ್ ಗೆ ತಿಳಿಸಿದ್ದಾರೆ .

LEAVE A REPLY

Please enter your comment!
Please enter your name here