ಕಡಬ ಟೈಮ್ಸ್, ಆಲಂಕಾರು: ಕೊರೋನಾ ಸೋಂಕಿತ ಬಾಣಂತಿಯೋರ್ವರು ಮೃತಪಟ್ಟ ಹಿನ್ನಲೆಯಲ್ಲಿ ಬಾಣಂತಿ ಮಹಿಳೆ ಮತ್ತು ಮಗು ವಾಸವಿದ್ದ ಆಲಂಕಾರಿನ ನೆಕ್ಕರೆಯ ಮನೆಯನ್ನು ಬುಧವಾರ ಸೀಲ್‌ಡೌನ್ ಮಾಡಲಾಗಿದೆ.
ಪುತ್ತೂರು ಮೂಲದ ಈ ಮಹಿಳೆ ಇತ್ತೀಚೆಗೆ ಹೆರಿಗೆಗೆಂದು ಮಂಗಳೂರು ಅಸ್ಪತ್ರೆಯಲ್ಲಿ ದಾಖಲಾಗಿದ್ದ ಕೂರ್ನಡ್ಕ ನಿವಾಸಿಯೊಬ್ಬರ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ಆಕೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ನಂತರ ಮಹಿಳೆ ಮತ್ತು ಹಸುಳೆಯನ್ನು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಬಾಣಂತಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಜು.8ರಂದು ಬಾಣಂತಿ ಮೃತಪಟ್ಟಿದ್ದರು.