Home ಪ್ರಮುಖ ಸುದ್ದಿ ಅಕ್ರಮ-ಸಕ್ರಮ ಸಮಿತಿಗೆ ವೆಂಕಟ್ ವಳಲಂಬೆ ಬದಲು ರಾಕೇಶ್ ರೈ ಕೆಡೆಂಜಿಯವರನ್ನು ನೇಮಿಸಿದ್ದು ಯಾಕೆ ಗೊತ್ತಾ?

ಅಕ್ರಮ-ಸಕ್ರಮ ಸಮಿತಿಗೆ ವೆಂಕಟ್ ವಳಲಂಬೆ ಬದಲು ರಾಕೇಶ್ ರೈ ಕೆಡೆಂಜಿಯವರನ್ನು ನೇಮಿಸಿದ್ದು ಯಾಕೆ ಗೊತ್ತಾ?

ಕಡಬ ಟೈಮ್ಸ್, ಸುಳ್ಯ ವಿಧಾನ ಸಭಾ ಕ್ಷೇತ್ರ:  ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಗೆ ಸದಸ್ಯರನ್ನು ನೇಮಿಸಿ ಅಧಿಸೂಚನೆ ಪ್ರಕಟಗೊಂಡ ಎರಡೇ ದಿನದಲ್ಲಿ ಈ ಪೈಕಿ ಓರ್ವರ ನೇಮಕವನ್ನು ರದ್ದುಗೊಳಿಸಿ ಹೊಸಬರನ್ನು ನೇಮಕ ಮಾಡಲಾಗಿದೆ.

UNIC-KADABA

ಈಗಾಗಲೇ ವೆಂಕಟ್ ವಳಲಂಬೆ, ಗುಣವತಿ ಕೊಲ್ಲಂತಡ್ಕ ಹಾಗೂ ಬಾಳಪ್ಪ ಕಳಂಜ ಇವರನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಮತ್ತೊಂದು ಅಧಿಸೂಚನೆ ಹೊರಡಿಸಿದ್ದು ವೆಂಕಟ್ ವಳಲಂಬೆಯವರ ನೇಮಕವನ್ನು ರದ್ದುಪಡಿಸಿ ಇವರ ಬದಲಿಗೆ ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿಯವರನ್ನು ನೇಮಿಸಿದ್ದಾರೆ.

GURUJI ADD

ಈ ಸಮಿತಿಯ ಪದಾಧಿಕಾರಿಗಳ ಆಯ್ಕೆಗೆ ರಾಜಕೀಯ ಮುಖಂಡರ ಪೈಪೋಟಿ ಇತ್ತು ಎನ್ನಲಾಗುತ್ತಿದೆ.ಆದರೆ “ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ತಾಲೂಕಿಗೆ ಹಾಗೂ ಕಡಬ ತಾಲೂಕಿಗೆ ಪ್ರತ್ಯೇಕ ಅಕ್ರಮ ಸಕ್ರಮ ಸಮಿತಿ ಆಗಬಹುದೆಂದು ಈ ಹಿಂದೆ ಯೋಚಿಸಿ ಹೆಸರು ಸೂಚಿಸಲಾಗಿತ್ತು. ಕ್ಷೇತ್ರಕ್ಕೆ ಒಂದೇ ಸಮಿತಿ ಮಾಡಬೇಕಾಗಿ ಬಂದುದರಿಂದ ಕಡಬ ತಾಲೂಕಿನವರು ಒಬ್ಬರು ಬೇಕೆನ್ನುವ ದೃಷ್ಟಿಯಿಂದ ವೆಂಕಟ್ ವಳಲಂಬೆಯವರು ಶಾಸಕರಲ್ಲಿ, ರಾಕೇಶ್ ರೈ ಕೆಡೆಂಜಿಯವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಬದಲಾವಣೆ ಮಾಡಲಾಗಿದೆ.” ಎಂದು ಬಿಜೆಪಿ ಸ್ಪಷ್ಟನೆ ನೀಡಿ ಅನುಮಾನಕ್ಕೆ ತೆರೆ ಎಳೆದಿದೆ.

LEAVE A REPLY

Please enter your comment!
Please enter your name here