Home ಪ್ರಮುಖ ಸುದ್ದಿ ಸುಂಕದಕಟ್ಟೆ:ರಬ್ಬರ್ ಮರಕ್ಕೆ ಔಷದ ಸಿಂಪಡನೆ ಮಾಡದೆ ನಿಗಮಕ್ಕೆ ವಂಚನೆ,ಅಧಿಕಾರಿಗಳು ಶಾಮಿಲು ಶಂಕೆ

ಸುಂಕದಕಟ್ಟೆ:ರಬ್ಬರ್ ಮರಕ್ಕೆ ಔಷದ ಸಿಂಪಡನೆ ಮಾಡದೆ ನಿಗಮಕ್ಕೆ ವಂಚನೆ,ಅಧಿಕಾರಿಗಳು ಶಾಮಿಲು ಶಂಕೆ

1
0

ಕಡಬ ಟೈಮ್ಸ್, ವಿಶೇಷ ವರದಿ:ಅವ್ಯವಹಾರದ ಮೂಲಕ ಸದಾ ಸುದ್ದಿಯಲ್ಲಿರುವ ಕರ್ನಾಟಕ  ಅರಣ್ಯ ಅಭಿವೃದ್ದಿ ನಿಗಮದಲ್ಲಿ ಮತ್ತೊಂದು  ವಂಚನಾ ಜಾಲ  ಸಾರ್ವಜನಿಕಗೊಂಡಿದೆ.

UNIC-KADABA

ಕೆ ಎಫ್. ಡಿ ಸಿ ಯ  ಸುಬ್ರಹ್ಮಣ್ಯ ರಬ್ಬರ್ ವಿಭಾಗದ ಕುಮಾರಧಾರ ಘಟಕದಲ್ಲಿ 129 ಹೆಕ್ಟರ್ ಪ್ರದೇಶದಲ್ಲಿರುವ  ರಬ್ಬರ್ ತೋಟದಲ್ಲಿ ಸುಮಾರು 27 ಬ್ಲಾಕ್ ಗಳಿಗೆ ಪೂರ್ಣ ಪ್ರಮಾಣದಲ್ಲಿ ಔಷಧಿ  ಸಿಂಪಡಿಸದೆ ನಿಗಮಕ್ಕೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ ಔಷಧಿ ಸಿಂಪಡಿಸುವ ಕಾಮಗಾರಿಯನ್ನು ಕೇರಳದ ಬಿಜು  ಎಂಬವರಿಗೆ ನೀಡಿದ್ದು  ಅವರು ರಬ್ಬರ್ ಬ್ಲಾಕ್ ನ  ಹಲವು ಕಡೆಗಳಲ್ಲಿ ಅನೇಕ ರಬ್ಬರ್ ಮರಗಳಿಗೆ  ಔಷಧಿ ಸಿಂಪಡಿಸದೆ ತೆರಳಿದ್ದಾರೆ. ಇದರಲ್ಲಿ ಕೆ.ಎಫ್.ಡಿ.ಸಿಯ ಅಧಿಕಾರಿಗಳು ಶಾಮಿಳಾಗಿದ್ದಾರೆ ಎನ್ನಲಾಗಿದೆ. ಔಷದಿ ಸಿಂಪಡನೆ ಮಾಡದೆ ವಂಚನೆ ಮಾಡಿರುವ ಸುದ್ದಿ ಸಾರ್ವಜನಿಕವಾಗಿ ಬಹಿರಂಗವಾಗುತ್ತಿದ್ದಂತೆ ಪ್ರಭಾರ ವಿಭಾಗೀಯ ವ್ಯವಸ್ಥಾಪಕ ಮಸ್ತಾನ್ ನೇತೃತ್ವದ ತಂಡ ತನ್ನ ಕರ್ತವ್ಯ ಲೋಪವನ್ನು   ತೋಟದ ಮೇಸ್ತ್ರಿಗಳ ಮೇಲೆ ಹ್ ತಲೆಗೆ ಹಾಕಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವುದು

GURUJI ADD

ಔಷಧಿ ಸಿಂಪಡಿಸದಿದ್ದರೆ ಮರದ ಎಲೆಗಳು ಉದುರಿ ರಬ್ಬರ್ ಹಾಲು ಕಡಿಮೆಯಾಗುತ್ತದೆ, ಒಂದು ವೇಳೆ ಹಾಲು ಕಡಿಮೆಯಾದರೆ ಅದರ ನಷ್ಟಕ್ಕೆ ಕಾರ್ಮಿಕರನ್ನು  ಹೊಣೆಗಾರರನ್ನಾಗಿ ಮಾಡುವ ಅಧಿಕಾರಿಗಳು ತಮ್ಮ ಅವ್ಯವಹಾರವನ್ನು ಮುಚ್ಚಿಡುತ್ತಲೇ ಬಂದಿದ್ದಾರೆ . ಇಲ್ಲಿ ಕೇವಲ ರಬ್ಬರ್ ಮಾಫಿಯ ಅಷ್ಟೆ ಅಲ್ಲ, ಸಮೀಪದ ನದಿಯಿಂದ ಅಕ್ರಮ ಮರಳು ಸಾಗಾಟವು ನಿರಂತರವಾಗಿ  ನಡೆಯುತ್ತಿದೆ, ಇದಕ್ಕೆ ಕೆ.ಎಫ್.ಡಿಯ ಸಿಬ್ಬಂದಿಯೋರ್ವರ ಕೈವಾಡವೂ ಇದೆ.

ಕೋಟಿಗಟ್ಟಲೆ ಹಣದ ಕಾಮಗಾರಿಗಳಲ್ಲಿ  ಗುತ್ತಿಗೆದಾರರು ಮತ್ತು ಅಧಿಕಾರಿಗಳ  ಒಪ್ಪಂದದಿಂದಾಗಿ ನಿಗಮಕ್ಕೆ ನಷ್ಟ ಉಂಟು ಮಾಡುತ್ತಿದ್ದು ಈ ಬಗ್ಗೆ ಮೇಲಾಧಿಕಾರಿಗಳು  ಕ್ರಮ ಜರುಗಿಸುತ್ತಾರಾ?

LEAVE A REPLY

Please enter your comment!
Please enter your name here