Home ಪ್ರಮುಖ ಸುದ್ದಿ ಬೆಳ್ಳಾರೆ ಝಖರಿಯ್ಯಾ ಜುಮಾ ಮಸ್ಜಿದ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಶುರು

ಬೆಳ್ಳಾರೆ ಝಖರಿಯ್ಯಾ ಜುಮಾ ಮಸ್ಜಿದ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಶುರು

ಕಡಬ ಟೈಮ್ಸ್, ಬೆಳ್ಳಾರೆ: ಸಾಮೂಹಿಕ ನಮಾಝ್ ಹಾಗೂ ಜುಮುಅ ಖುತುಬ ಪುನರಾರಂಭಿಸಲು ಸರಕಾರದ ಆಜ್ಞೆ ಬಂದ ಹಿನ್ನೆಲೆಯಲ್ಲಿ ಜೂನ್ 08 ರಿಂದ ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿಯಲ್ಲಿ ಸಾಮೂಹಿಕ ನಮಾಜ್ ಪ್ರಾರಂಭಗೊಂಡಿದೆ.

UNIC-KADABA

ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಬಹು. ಸಯ್ಯದ್ ಮುಹಮ್ಮದ್ ಜಿಫ್ರಿ ತಂಙಳ್ ಹಾಗೂ ಇಂಡಿಯನ್ ಗ್ರಾಂಡ್ ಮುಫ್ತಿ ಬಹು. ಎ.ಪಿ.ಉಸ್ತಾದರ ಮಾರ್ಗದರ್ಶನ ಹಾಗೂ ಉಭಯ ಜಿಲ್ಲೆಗಳ ಖಾಝಿಗಳ ಮತ್ತು ಬೆಳ್ಳಾರೆ ಮಹಲ್ ಇಮಾಮರಾದ ಬಹು.ಯೂನುಸ್ ಸಖಾಫಿ ಯವರುಗಳ ನಿರ್ದೇಶನ ಪ್ರಕಾರ ಜಮಾಅತ್ ಅಧ್ಯಕ್ಷ ಕೆ.ಎಂ ಮುಹಮ್ಮದ್ ಹಾಜಿ ಯವರ ಅನುಮತಿ ಮೇರೆಗೆ ಸಾಮೂಹಿಕ ನಮಾಜ್ ಪ್ರಾರಂಭಗೊಂಡಿದೆ.

GURUJI ADD

ಶುಕ್ರವಾರ ಮಸೀದಿಯಲ್ಲಿ  ಜುಮ್ಅ ಖುತ್ಬಾ ನೆರವೇರಿತು.  ವಿಸ್ವಾಸಿಗಳು ಸರ್ಕಾರ ಮತ್ತು ಜಮಾಅತಿನ ನಿಯಮಗಳನ್ನು ಪಾಲಿಸಿಕೊಂಡು ಪ್ರಾರ್ಥನೆ ಯಲ್ಲಾಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here