Home ಪ್ರಮುಖ ಸುದ್ದಿ ಕಲ್ಲುಗುಡ್ಡೆ:ವಿವಿಧ ದೇವಸ್ಥಾನಗಳಿಗೆ ಕಸದಬುಟ್ಟಿ ವಿತರಣೆ

ಕಲ್ಲುಗುಡ್ಡೆ:ವಿವಿಧ ದೇವಸ್ಥಾನಗಳಿಗೆ ಕಸದಬುಟ್ಟಿ ವಿತರಣೆ

1
0

ಕಡಬ ಟೈಮ್ಸ್, ಕಲ್ಲುಗುಡ್ಡೆ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಶ್ರದ್ಧಾ ಕೇಂದ್ರ ಸ್ವಚ್ಚವಾಗಿರಲಿ ಎಂಬ ಉದ್ದೇಶದಿಂದ ಕೊಡಮಾಡಲಾದ ಕಸದ ಬುಟ್ಟಿಗಳನ್ನು ದೇವಸ್ಥಾನಗಳಿಗೆ ಬುಧವಾರ ವಿತರಿಸಲಾಯಿತು.

UNIC-KADABA

ನೂಜಿಬಾಳ್ತಿಲ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ, ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಹಾಗೂ  ಕುಟ್ರುಪಾಡಿ ಕೇಪು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ಕಸದಬುಟ್ಟಿಗಳನ್ನು ವಿತರಿಸಲಾಯಿತು.

GURUJI ADD

ಬಿಳಿನೆಲೆ ವಲಯ ಮೇಲ್ವಿಚಾರಕರಾದ ಧರ್ಣಪ್ಪ,  ಒಕ್ಕೂಟಗಳ ಅಧ್ಯಕ್ಷರಾದ ಪುರುಷೋತ್ತಮ, ಸುಂದರ, ಪ್ರಮುಖರಾದ ಅನಿತಾ ಎಸ್., ಎಸ್‍ಪಿಗಳಾದ ಯಶವಂತ, ದಯಾನಂದ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು, ಅರ್ಚಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here