ಕಡಬ ಟೈಮ್ಸ್, ಪಟ್ಟಣ ಸುದ್ದಿ:ಕಡಬದ ವ್ಯಕ್ತಿಗೆ ಕೊರೋನಾ ಸೋಂಕು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬೆನ್ನಲ್ಲೇ ಇನ್ನೊಂದು ಪ್ರಕರಣ ಪತ್ತೆಯಾಗಿದೆ.
ಕ್ವಾರಂಟೈನ್ ನಲ್ಲಿದ್ದ ಸಿ.ಎ.ಬ್ಯಾಂಕ್ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕಡಬ ಪೇಟೆಯ ಪಂಜ ರಸ್ತೆಯಲ್ಲಿರುವ ಸಿ.ಎ ಬ್ಯಾಂಕ್ ನ ಪರಿಸರದ 100 ಮೀಟರ್ ವ್ಯಾಪ್ತಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಪಕ್ಕದಲ್ಲಿದ್ದ ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸಲಾಗಿದ್ದು ಸ್ಥಳೀಯಾಡಳಿತ ಮುಂಜಾಗೃತಾ ಕ್ರಮ ಕೈಗೊಂಡಿದೆ. ಸೀಲ್ ಡೌನ್ ಸ್ಥಳಕ್ಕೆ ತಹಸೀಲ್ದಾರ್ ಜಾನ್ ಪ್ರಕಾಶ್, ಪಿಡಿಒ ಚೆನ್ನಪ್ಪ ಗೌಡ, ವಿ.ಎ ಹರೀಶ್ ಕುಮಾರ್ ಸಹಿತ ಹಲವು ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲಿಸಿದ್ದಾರೆ.